ಭಾನುವಾರ, ಸೆಪ್ಟೆಂಬರ್ 15, 2019
27 °C

ಬಂಡವಾಳ ಸಂಗ್ರಹ: ಇದೇ 13ರಂದುಕೆನರಾ ಬ್ಯಾಂಕ್‌ ಆಡಳಿತ ಮಂಡಳಿ ಸಭೆ

Published:
Updated:

ನವದೆಹಲಿ: ಬಂಡವಾಳ ಸಂಗ್ರಹ, ಸಿಂಡಿಕೇಟ್‌ ಬ್ಯಾಂಕ್‌ ವಿಲೀನದ ನಿರ್ಧಾರಗಳ ಪರಿಶೀಲನೆ ನಡೆಸಲು ಕೆನರಾ ಬ್ಯಾಂಕ್‌ ಆಡಳಿತ ಮಂಡಳಿ ಸೆಪ್ಟೆಂಬರ್‌ 13ರಂದು ಸಭೆ ನಡೆಸಲಿದೆ.

ತನ್ನ ಬಳಿ ಇರುವ ಆದ್ಯತಾ ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಮೂಲಕ ₹ 9 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ. ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

ಕೇಂದ್ರ ಸರ್ಕಾರವು ಕಳೆದ ವಾರ 10 ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ನಿರ್ಧಾರ ಘೋಷಿಸಿದೆ. ಅದರಂತೆ, ಕೆನರಾ ಬ್ಯಾಂಕ್‌ನಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ವಿಲೀನಗೊಳ್ಳಲಿದೆ.

Post Comments (+)