ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌ಗೆ ₹ 329 ಕೋಟಿ ಲಾಭ

Last Updated 24 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕೆನರಾ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 329 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 281 ಕೋಟಿಗೆ ಹೋಲಿಸಿದರೆ, ಈ ಬಾರಿಯ ನಿವ್ವಳ ಲಾಭವು ಶೇ 17ರಷ್ಟು ಏರಿಕೆಯಾಗಿದೆ. ಸಾಲ ವಸೂಲಾತಿ ಪ್ರಕ್ರಿಯೆ ಸುಧಾರಿಸಿರುವುದರಿಂದ ಲಾಭದ ಪ್ರಮಾಣ ಹೆಚ್ಚಳಗೊಂಡಿದೆ.

ಒಟ್ಟಾರೆ ವರಮಾನ ಹಿಂದಿನ ವರ್ಷದ ಇದೇ ಅವಧಿಯಲ್ಲಿನ₹ 13,192 ಕೋಟಿಗಳಿಂದ ₹ 14,062 ಕೋಟಿಗಳಿಗೆ ತಲುಪಿದೆ. ಒಟ್ಟಾರೆ ವಹಿವಾಟು ಶೇ 13ರಷ್ಟು ಏರಿಕೆಯಾಗಿ ₹ 10.59 ಲಕ್ಷ ಕೋಟಿಗೆ ತಲುಪಿದೆ.

ಒಟ್ಟು ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ವರ್ಷದ ಹಿಂದಿನ ಶೇ 11ರಿಂದ 8.77ಕ್ಕೆ ಮತ್ತು ನಿವ್ವಳ ಎನ್‌ಪಿಎ ಶೇ 6.91 ರಿಂದಶೇ 5.35ಕ್ಕೆ ಇಳಿದಿದೆ. ಇದರ ಫಲವಾಗಿ ಎನ್‌ಪಿಎಗಳಿಗಾಗಿ ತೆಗೆದು ಇರಿಸುವ ಮೊತ್ತವು ₹ 2,466 ಕೋಟಿಗಳಿಂದ ₹ 2,282 ಕೋಟಿಗಳಿಗೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT