ಬುಧವಾರ, ಆಗಸ್ಟ್ 17, 2022
25 °C

ಕೆನರಾ ಬ್ಯಾಂಕ್:‌ ನಿಶ್ಚಿತ ಠೇವಣಿ ಬಡ್ಡಿದರ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.2ರಷ್ಟು ಹೆಚ್ಚಿಸಿದೆ.

ಪರಿಷ್ಕೃತ ಬಡ್ಡಿದರಗಳು ನವೆಂಬರ್‌ 27 ರಿಂದಲೇ ಅನ್ವಯಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ನಿರ್ಧಾರದಿಂದಾಗಿ, ಎರಡು ವರ್ಷಗಳಿಂದ ಮೂರು ವರ್ಷಗಳ ಒಳಗಿನ ನಿಶ್ಚಿತ ಠೇವಣಿಗೆ ಶೇ 5.2ಕ್ಕೆ ಬದಲಾಗಿ ಶೇ 5.4ರಷ್ಟು ಬಡ್ಡಿದರ ಸಿಗಲಿದೆ.

ಮೂರು ವರ್ಷಗಳಿಂದ 10 ವರ್ಷಗಳ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಶೇ 5.3 ರಿಂದ ಶೇ 5.5ಕ್ಕೆ ಏರಿಕೆಯಾಗಿದೆ.

ಹಿರಿಯ ನಾಗರಿಕರಿಗೆ ಪರಿಷ್ಕೃತ ಬಡ್ಡಿದರದ ಮೇಲೆ ಶೇ 0.50ರಷ್ಟು ಹೆಚ್ಚಿಗೆ ಸಿಗಲಿದೆ.

ಆರ್‌ಬಿಐ ಬಡ್ಡಿದರ ಪರಾಮರ್ಶೆ ನಿರ್ಧಾರ ಪ್ರಕಟಿಸುವ ಒಂದು ದಿನಕ್ಕೂ ಮೊದಲೇ ಬ್ಯಾಂಕ್‌ ಈ ನಿರ್ಧಾರ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು