ಸೋಮವಾರ, ಜೂನ್ 21, 2021
29 °C

ಕೆನರಾ ಬ್ಯಾಂಕ್‌ ₹ 1,010 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ ₹ 1,010 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ಒಟ್ಟು ₹ 6,567 ಕೋಟಿ ನಷ್ಟ ಅನುಭವಿಸಿತ್ತು.

ಬ್ಯಾಂಕ್‌ನ ಕಾರ್ಯಾಚರಣೆ ಲಾಭದಲ್ಲಿ ಶೇಕಡ 136.40ರಷ್ಟು ಬೆಳವಣಿಗೆ ಆಗಿದೆ. 2020–21ನೆಯ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ಒಟ್ಟು ₹ 2,557 ಕೋಟಿ ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ₹ 5838 ಕೋಟಿ ನಷ್ಟ ಕಂಡಿತ್ತು.

ಬ್ಯಾಂಕ್‌ನ ನಿವ್ವಳ ಲಾಭವು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕಕ್ಕೆ ಹೋಲಿಸಿದರೆ, ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 45.11ರಷ್ಟು ಏರಿಕೆ ದಾಖಲಿಸಿದೆ.

‘ಫೆಬ್ರುವರಿ ನಂತರದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಆಗುತ್ತಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ವಹಿವಾಟುಗಳು ಒಳ್ಳೆಯ ರೀತಿಯಲ್ಲಿ ನಡೆದಿವೆ. ಕೋವಿಡ್‌ನಿಂದಾಗಿ ಇದುವರೆಗೆ ಕೆಟ್ಟ ಪರಿಣಾಮ ವಹಿವಾಟಿನ ಮೇಲೆ ಆಗಿಲ್ಲ. ನಾವು ಈಗ ವೈದ್ಯಕೀಯ ಉಪಕರಣಗಳ ಉದ್ಯಮ ವಲಯ ಮತ್ತು ಆಸ್ಪತ್ರೆಗಳಿಗೆ ಅಗತ್ಯವಿರುವ ಹಣಕಾಸಿನ ಸೇವೆ ಒದಗಿಸುವತ್ತ ಗಮನ ನೀಡಿದ್ದೇವೆ’ ಎಂದು ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್.ವಿ. ಪ್ರಭಾಕರ್ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ವಲಯಕ್ಕೆ ನೀಡಿರುವ ಆದ್ಯತೆಯು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು