ಬೆಂಗಳೂರು: 2025–26ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ನ ನಿವ್ವಳ ಲಾಭದಲ್ಲಿ ಶೇ 10ರಷ್ಟು ಇಳಿಕೆಯಾಗಿದೆ.

2024–25ರಲ್ಲಿ ಬ್ಯಾಂಕ್ ₹5,002 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹4,506 ಕೋಟಿಗೆ ಇಳಿದಿದೆ ಎಂದು ಬ್ಯಾಂಕ್ ಷೇರುಪೇಟೆಗೆ ಸೋಮವಾರ ತಿಳಿಸಿದೆ.

ಬ್ಯಾಂಕ್ನ ಒಟ್ಟು ವರಮಾನ ಶೇ 1.85ರಷ್ಟು ಕಡಿಮೆಯಾಗಿದ್ದು, ₹36,662 ಕೋಟಿಯಷ್ಟಾಗಿದೆ. ನಿವ್ವಳ ಬಡ್ಡಿ ವರಮಾನವು ₹9,808 ಕೋಟಿ ಆಗಿದೆ. ಬ್ಯಾಂಕ್ನ ವಸೂಲಾಗದ ಸಾಲದ ಸರಾಸರಿ ಪ್ರಮಾಣದಲ್ಲಿ ಸುಧಾರಣೆ ಕಂಡಿದ್ದು, ಶೇ 2.94ರಿಂದ ಶೇ 1.84ಕ್ಕೆ ಇಳಿದಿದೆ. ನಿವ್ವಳ ಎನ್ಪಿಎ ಶೇ 0.7ರಿಂದ ಶೇ 0.43ಕ್ಕೆ ಇಳಿದಿದೆ.

ಪ್ರತಿ ಈಕ್ವಿಟಿ ಷೇರಿಗೆ ₹4.20 ಲಾಭಾಂಶ ನೀಡಲು ಶಿಫಾರಸು ಮಾಡಲಾಗಿದೆ.

ಕಳೆದ ಪೂರ್ಣ ಆರ್ಥಿಕ ವರ್ಷದಲ್ಲಿ ಬ್ಯಾಂಕ್ನ ಲಾಭದಲ್ಲಿ ಶೇ 12.7ರಷ್ಟು ಏರಿಕೆಯಾಗಿದ್ದು, ₹19,187 ಕೋಟಿಯಷ್ಟಾಗಿದೆ. ವರಮಾನವು ₹1.53 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ಬ್ಯಾಂಕ್ನ ಒಟ್ಟಾರೆ ಜಾಗತಿಕ ವ್ಯವಹಾರ ಶೇ 12.11ರಷ್ಟು ಹೆಚ್ಚಳವಾಗಿದ್ದು, ₹28.06 ಲಕ್ಷ ಕೋಟಿಯಷ್ಟಾಗಿದೆ. ಠೇವಣಿ ಪ್ರಮಾಣದಲ್ಲಿ ಶೇ 9.71ರಷ್ಟು ಏರಿಕೆ, ಸಾಲ ನೀಡಿಕೆಯಲ್ಲಿ ಶೇ 15.30ರಷ್ಟು ಹೆಚ್ಚಳ ಆಗಿದೆ.

ರಿಟೇಲ್, ಕೃಷಿ ಮತ್ತು ಎಂಎಸ್ಎಂಇ ವಲಯಕ್ಕೆ ನೀಡಿರುವ ಸಾಲದಲ್ಲಿ ಶೇ 19.73ರಷ್ಟು ಬೆಳವಣಿಗೆ ಕಂಡಿದ್ದು, ₹7.30 ಲಕ್ಷ ಕೋಟಿಗೆ ತಲುಪಿದೆ. ಗೃಹ ಸಾಲದಲ್ಲಿ ಶೇ 17.55ರಷ್ಟು ಏರಿಕೆಯಾಗಿದ್ದು, ₹1.24 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.