ಗುರುವಾರ , ಡಿಸೆಂಬರ್ 3, 2020
20 °C

ಸೆಪ್ಟೆಂಬರ್‌ 1ರಿಂದ ಕಾರ್‌, ಬೈಕ್‌ ಖರೀದಿ ದುಬಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೀರ್ಘಾವಧಿ ಥರ್ಡ್‌ ಪಾರ್ಟಿ ವಿಮೆ ಕಡ್ಡಾಯಗೊಳಿಸಿರುವುದರಿಂದ ಸೆಪ್ಟೆಂಬರ್‌ 1ರಿಂದ ಹೊಸ ಕಾರ್‌, ಬೈಕ್‌ ಖರೀದಿಸುವುದು ದುಬಾರಿಯಾಗಲಿದೆ.

ಹೊಸ ಕಾರ್‌ಗಳಿಗೆ 3 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 5 ವರ್ಷಗಳ ಥರ್ಡ್‌ಪಾರ್ಟಿ ವಿಮೆ ಪಡೆದುಕೊಳ್ಳುವುದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಕಡ್ಡಾಯ ಮಾಡಿದೆ.

ಕಾರ್‌ ಮತ್ತು ಬೈಕ್‌ಗಳ ಎಂಜಿನ್‌ ಸಾಮರ್ಥ್ಯ ಆಧರಿಸಿ ಈ ದೀರ್ಘಾವಧಿ ವಿಮೆ ವೆಚ್ಚ ವ್ಯತ್ಯಾಸವಾಗಲಿದೆ. ಮೋಟರ್‌ ವಾಹನಗಳ ಕಾಯ್ದೆ ಪ್ರಕಾರ, ಥರ್ಡ್‌ ಪಾರ್ಟಿ ವಿಮೆ ಕಡ್ಡಾಯವಾಗಿದೆ.

ಸಮಗ್ರ ವಿಮೆ ಸೌಲಭ್ಯದಡಿ, ಕಳ್ಳತನ, ಅಪಘಾತ ಸಂದರ್ಭಗಳಲ್ಲಿ ವಾಹನಕ್ಕೆ ಆಗುವ ಯಾವುದೇ ಬಗೆಯ ನಷ್ಟ ಭರ್ತಿ ಮಾಡಿಕೊಳ್ಳಲು ಕಾರ್‌ ಖರೀದಿದಾರರು  3 ವರ್ಷಗಳ ಥರ್ಡ್‌ ಪಾರ್ಟಿ ವಿಮೆ ಮತ್ತು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ 5 ವರ್ಷಗಳ ವಿಮೆ ಪಡೆದುಕೊಳ್ಳಬೇಕು.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ, ಸಾಮಾನ್ಯ ವಿಮೆ ಸಂಸ್ಥೆಗಳು ಹೊಸ ಕಾರ್‌ಗಳಿಗೆ 3 ವರ್ಷಗಳ ಮತ್ತು ಹೊಸ ಬೈಕ್‌ಗಳಿಗೆ 5 ವರ್ಷಗಳ ಥರ್ಡ್‌ಪಾರ್ಟಿ ವಿಮೆ ಸೌಲಭ್ಯವನ್ನೇ ಕಲ್ಪಿಸಿಕೊಡಬೇಕು. ಈ ಸಂಬಂಧ ‘ಐಆರ್‌ಡಿಎಐ’ ಸುತ್ತೋಲೆ ಕಳಿಸಿದೆ. ಸೆಪ್ಟೆಂಬರ್‌ 1ರಿಂದ ಮಾರಾಟ ಮಾಡುವ ವಿಮೆ ಯೋಜನೆಗಳಿಗೆ ಇದು ಕಡ್ಡಾಯವಾಗಿ ಅನ್ವಯವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು