ಶುಕ್ರವಾರ, ಆಗಸ್ಟ್ 19, 2022
25 °C

ರಿಲಯನ್ಸ್‌ನ ರಿಟೇಲ್‌ ಉದ್ಯಮದಲ್ಲಿ ಕಾರ್ಲೈಲ್‌ 2 ಬಿಲಿಯನ್‌ ಡಾಲರ್‌ ಹೂಡಿಕೆ?

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ ಫ್ರೆಷ್‌ ಮಳಿಗೆಯೊಂದರಲ್ಲಿ ಸಾಮಗ್ರಿಗಳ ಖರೀದಿಯಲ್ಲಿರುವ ಗ್ರಾಹಕರು–ಸಂಗ್ರಹ ಚಿತ್ರ

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ನ ರಿಟೇಲ್‌ ಉದ್ಯಮದಲ್ಲಿ ಅಮೆರಿಕದ ಖಾಸಗಿ ಈಕ್ವಿಟಿ ಸಂಸ್ಥೆ ಕಾರ್ಲೈಲ್‌ ಗ್ರೂಪ್‌ ಸುಮಾರು 2 ಬಿಲಿಯನ್‌ ಡಾಲರ್‌ ( ಅಂದಾಜು ₹14,666 ಕೋಟಿ) ಹೂಡಿಕೆ ಮಾಡಲು ಯೋಚಿಸುತ್ತಿರುವುದಾಗಿ ಮಿಂಟ್‌ ಸೋಮವಾರ ವರದಿ ಮಾಡಿದೆ.

ಈ ಹೂಡಿಕೆ ಒಪ್ಪಂದ ಖಚಿತಪಟ್ಟರೆ, ಕಾರ್ಲೈಲ್‌ಗೆ ಇದು ಭಾರತದ ಕಂಪನಿಗಳ ಪೈಕಿ ಅತಿ ದೊಡ್ಡ ಹೂಡಿಕೆ ಹಾಗೂ ದೇಶದ ರಿಟೇಲ್‌ ಕ್ಷೇತ್ರದಲ್ಲಿ ಮೊದಲನೆಯ ಹೂಡಿಕೆಯಾಗಲಿದೆ.

ರಿಲಯನ್ಸ್ ಸಮೂಹದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ಶೇಕಡ 40ರಷ್ಟು ಷೇರುಗಳನ್ನು ಅಮೆಜಾನ್‌ಗೆ ಮಾರಾಟ ಮಾಡುವ ಪ್ರಸ್ತಾವ ಮಾಡಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಆ ವಹಿವಾಟಿನ ಮೊತ್ತವು 20 ಬಿಲಿಯನ್ ಅಮೆರಿಕನ್ ಡಾಲರ್ (₹ 1.46 ಲಕ್ಷ ಕೋಟಿ) ಆಗಬಹುದು.

ಕಾರ್ಲೈಲ್‌ ಮತ್ತು ರಿಲಯನ್ಸ್‌ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಮವಾರ ಷೇರುಪೇಟೆಯ ವಹಿವಾಟಿನಲ್ಲಿ ರಿಲಯನ್ಸ್‌ ಷೇರು ಬೆಲೆ ₹17.65ರಷ್ಟು ಏರಿಕೆಯಾಗಿ ₹2,337.40 ತಲುಪಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 280 ಅಂಶ ಹೆಚ್ಚಳವಾಗಿ 39,127.93 ಅಂಶಗಳು ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 71.80 ಅಂಶ ಏರಿಕೆಯೊಂದಿಗೆ 11,536.25 ಅಂಶಗಳಲ್ಲಿ ವಹಿವಾಟು ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು