ಎಟಿಎಂ ಹಣ ಭರ್ತಿ: ಸಮಯದ ನಿರ್ಬಂಧ

7

ಎಟಿಎಂ ಹಣ ಭರ್ತಿ: ಸಮಯದ ನಿರ್ಬಂಧ

Published:
Updated:
Deccan Herald

ನವದೆಹಲಿ: ಸುರಕ್ಷತೆ ದೃಷ್ಟಿಯಿಂದ ಎಟಿಎಂಗಳಲ್ಲಿ ಬ್ಯಾಂಕ್‌ಗಳ ವತಿಯಿಂದ ಹಣ ಭರ್ತಿ ಮಾಡುವ ಸಮಯದ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ಗೃಹ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ.

ನಗರ ಪ್ರದೇಶಗಳಲ್ಲಿ ರಾತ್ರಿ 9ರ ನಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6ರ ನಂತರ ಎಟಿಎಂಗಳಿಗೆ ಹಣ ಭರ್ತಿ ಮಾಡುವುದರ ಮೇಲೆ ನಿರ್ಬಂಧ ವಿಧಿಸಲು ಉದ್ದೇಶಿಸಲಾಗಿದೆ. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ  ಹಣ ಭರ್ತಿ ಮಾಡುವ ಸಮಯವನ್ನು ಬೆಳಗಿನ 9ರಿಂದ ಮಧ್ಯಾಹ್ನ 4ಗಂಟೆಯವರೆಗೆ  ನಿಗದಿಪಡಿಸಲಾಗಿದೆ.

ನಗದು ಸಾಗಿಸುವ ವಾಹನಗಳ ಮೇಲೆ ಹೆಚ್ಚುತ್ತಿರುವ ದಾಳಿ, ಎಟಿಎಂಗಳಿಂದ ಹಣ ದೋಚುವ ಯತ್ನ, ವಂಚನೆ ಮತ್ತಿತರ  ದುಷ್ಕೃತ್ಯಗಳನ್ನು ತಡೆಗಟ್ಟಲು ಮುಂದಿನ ವರ್ಷದ ಫೆಬ್ರುವರಿಯಲ್ಲಿ ಈ ಕ್ರಮಗಳು ಜಾರಿಗೆ ಬರಲಿವೆ. ಕೆಲ ಖಾಸಗಿ ಸಂಸ್ಥೆಗಳು ನಗದು ಖಜಾನೆಗಳಲ್ಲಿ ರಾತ್ರಿಯಿಡೀ ಕರೆನ್ಸಿ ಇಟ್ಟುಕೊಂಡಿರುವುದಕ್ಕೆ ಕಡಿವಾಣ ಹಾಕಲೂ ನಿರ್ಧರಿಸಲಾಗಿದೆ. ಸಂಸ್ಥೆಗಳು ಪ್ರತಿ ವಾಹನಕ್ಕೆ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ, ಇಬ್ಬರು ಅಧಿಕಾರಿಗಳನ್ನು ಒದಗಿಸಬೇಕು. ಯಾವುದೇ ಸಂದರ್ಭದಲ್ಲಿ  ಭದ್ರತಾ ಪಡೆಯ ಒಬ್ಬ ವಾಹನದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಜಿಪಿಎಸ್‌ ಅಳವಡಿಸಿದ ವಾಹನದಲ್ಲಿಯೇ ನಗದು ಸಾಗಿಸಬೇಕು. ವಾಹನದಲ್ಲಿ ಒಂದು ಬಾರಿಗೆ ₹ 5 ಕೋಟಿಗಿಂತ ಹೆಚ್ಚಿನ ಮೊತ್ತ ಇರಬಾರದು. ಪುಟ್ಟ ಸಿಸಿಟಿವಿ ಕ್ಯಾಮೆರಾ ಸೌಲಭ್ಯ, ಸ್ವಯಂ
ಚಾಲಿತ ಎಚ್ಚರಿಕೆಯ ಗಂಟೆ ಅಳವಡಿಕೆ ಸೇರಿದಂತೆ ಅನೇಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !