ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ 50ನೇ ವರ್ಷದ ಸಂಭ್ರಮದಲ್ಲಿ ಕ್ಯಾಟರ್‌ಪಿಲ್ಲರ್

Last Updated 1 ಮಾರ್ಚ್ 2021, 14:59 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದ ಅತಿದೊಡ್ಡ ನಿರ್ಮಾಣ ಮತ್ತು ಗಣಿಗಾರಿಕೆ ಉಪಕರಣಗಳ ತಯಾರಕ ಕ್ಯಾಟರ್ಪಿಲ್ಲರ್ ಕಂಪನಿಯು ಭಾರತದಲ್ಲಿ ತಯಾರಿಕೆ ಆರಂಭಿಸಿ 50ನೇ ವರ್ಷಕ್ಕೆ ಪ್ರವೇಶಿಸಿದ ಸಂಭ್ರಮದಲ್ಲಿದೆ.

ತನ್ನ ಕಾರ್ಯಾಚರಣಾ ಕ್ಷೇತ್ರಗಳ ಸುರಕ್ಷತೆ, ತಯಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ತನ್ನ ಯಂತ್ರಗಳನ್ನು ಪ್ರಮುಖ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವ ಸುದೀರ್ಘ ಇತಿಹಾಸವನ್ನುಕಂಪನಿಯು ಹೊಂದಿದೆ.

ಕಂಪನಿಯು 1930ರಿಂದ ಭಾರತದಲ್ಲಿ ಸಕ್ರಿಯವಾಗಿದೆ. ಸದ್ಯ, ಆರು ಅತ್ಯಾಧುನಿಕ ತಯಾರಿಕಾ ಘಟಕಗಳು, ಎರಡು ಆರ್&ಡಿ ಕೇಂದ್ರಗಳು, ಐದು ಅಂಗಸಂಸ್ಥೆಗಳು, ಎಂಟು ಬ್ರಾಂಡ್‌ಗಳನ್ನು ಹೊಂದಿದೆ.

‘1948ರಲ್ಲಿ ಬಾಕ್ರಾ ನಾಂಗಲ್ ಅಣೆಕಟ್ಟಿನ ನಿರ್ಮಾಣದಲ್ಲಿ ಕಂಪನಿಯ ಉಪಕರಣಗಳನ್ನು ಬಳಸಲಾಗಿದೆ ಎನ್ನುವುದು ಗಮನಾರ್ಹವಾದ ವಿಷಯ. ಭಾರತದಾದ್ಯಂತ ಗಣಿಗಾರಿಕೆ, ನಿರ್ಮಾಣ, ಸಾರಿಗೆ, ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕ್ಯಾಟರ್ಪಿಲ್ಲರ್‌ ಬೆಂಬಲ ನೀಡುತ್ತಿದೆ’ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ಬನ್ಸಿ ಫನ್ಸಲ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT