ಗುರುವಾರ , ನವೆಂಬರ್ 14, 2019
19 °C

ಬ್ಲ್ಯಾಕ್‌ಸ್ಟೋನ್‌ಗೆ ಟೆಕ್‌ಪಾರ್ಕ್‌: ಸಿಡಿಇಎಲ್

Published:
Updated:

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ಬೆಂಗಳೂರಿನಲ್ಲಿರುವ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್‌ ಅನ್ನು ₹ 2,700 ಕೋಟಿಗೆ ಅಮೆರಿಕದ ಬ್ಲ್ಯಾಕ್‌ಸ್ಟೋನ್‌ ಮತ್ತು ಸಾಲರ್‌ಪುರಿಯಾ ಸತ್ವಾ ಕಂಪನಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದೆ.

ಅಕ್ಟೋಬರ್‌ 31ಕ್ಕೆ ಮಾರಾಟದ ಪ್ರಕ್ರಿಯೆ ಅಂತಿಮ ಗೊಳ್ಳುವ ನಿರೀಕ್ಷೆ ಮಾಡಿದೆ. ಇದರಿಂದ ಸಾಲವು ₹ 5 ಸಾವಿರ ಕೋಟಿಗೆ ಇಳಿಕೆಯಾಗಲಿದೆ.

ತನ್ನ ಅಂಗಸಂಸ್ಥೆ ಟ್ಯಾಂಗ್ಲಿಂಗ್‌ ಡೆವಲಪ್‌ಮೆಂಟ್ಸ್‌ ಲಿಮಿಟೆಡ್‌ನ ಒಡೆತನದಲ್ಲಿರುವ ಟೆಕ್‌ಪಾರ್ಕ್‌ ನಲ್ಲಿ ಎರಡೂ ಕಂಪನಿಗಳು ಹೂಡಿಕೆ ಮಾಡುವ ಒಪ್ಪಂದಕ್ಕೆ ಬಂದಿವೆ ಎಂದು ‘ಸಿಡಿಇಎಲ್‌’ ಷೇರುಪೇಟೆಗೆ ಮಾಹಿತಿ ನೀಡಿದೆ.

ಅಂಗಸಂಸ್ಥೆ ಸೋಶಿಯಲ್‌ ಲಾಜಿಸ್ಟಿಕ್ಸ್‌ ತನ್ನ ಕೆಲವು ಆಸ್ತಿಗಳನ್ನು ಮಾರಾಟ ಮಾಡುವ ನಿರ್ಧಾರ ಪ್ರಕಟಿಸಿದೆ.

ಪ್ರತಿಕ್ರಿಯಿಸಿ (+)