ನವದೆಹಲಿ: ಉದ್ಯಮ ವಲಯಕ್ಕೆ ನೆರವು ಒದಗಿಸುವ ಉದ್ದೇಶದಿಂದ ₹2.5 ಲಕ್ಷ ಕೋಟಿ ಮೊತ್ತದ ಸಾಲ ಖಾತರಿ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಅದರಲ್ಲೂ ಮುಖ್ಯವಾಗಿ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ತೊಂದರೆಗೆ ಒಳಗಾಗಿರುವ ಎಂಎಸ್ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ) ಉದ್ಯಮಗಳಿಗೆ ನೆರವು ನೀಡಲು ಈ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ.

ಈ ಯೋಜನೆಯ ಅಡಿಯಲ್ಲಿ, ಅಮೆರಿಕ–ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಉದ್ಯಮಗಳು ಸಾಲ ಮರುಪಾವತಿಯಲ್ಲಿ ವಿಫಲವಾದಲ್ಲಿ ಸಾಲದ ಶೇಕಡ 90ರಷ್ಟು ಮೊತ್ತದವರೆಗಿನ ಅಥವಾ ಗರಿಷ್ಠ ₹100 ಕೋಟಿವರೆಗಿನ ಮೊತ್ತಕ್ಕೆ ಕೇಂದ್ರ ಸರ್ಕಾರವು ಖಾತರಿ ಒದಗಿಸಲಿದೆ.

ಕೇಂದ್ರ ಸರ್ಕಾರದ ಪೂರ್ಣ ಮಾಲೀಕತ್ವದ ‘ರಾಷ್ಟ್ರೀಯ ಸಾಲ ಖಾತರಿ ಟ್ರಸ್ಟಿ ಕಂಪನಿ’ಯು (ಎನ್ಸಿಜಿಟಿಸಿ) ಬ್ಯಾಂಕ್ ಸಾಲಗಳಿಗೆ ಈ ಬಗೆಯ ಖಾತರಿಯನ್ನು ಒದಗಿಸಲಿದೆ. ಯೋಜನೆಗಾಗಿ ಕೇಂದ್ರ ಸರ್ಕಾರವು ಗರಿಷ್ಠ ₹18 ಸಾವಿರ ಕೋಟಿವರೆಗೆ ಹಣ ಒದಗಿಸಬೇಕಾಗುತ್ತದೆ.

ಈ ಯೋಜನೆಯು ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಹಳ ದೊಡ್ಡ ಯಶಸ್ಸು ಸಾಧಿಸಿತ್ತು. ಇದು ವಿವಿಧ ವಲಯಗಳ ಹಲವು ಉದ್ದಿಮೆಗಳು ತಮ್ಮ ಸಾಲ ತೀರಿಸಲು ನೆರವಾಯಿತು ಎಂದು ಮೂಲಗಳು ವಿವರಿಸಿವೆ.

ಕೋವಿಡ್–19 ಸಾಂಕ್ರಾಮಿಕದಿಂದಾಗಿ ತೊಂದರೆಗೆ ಒಳಗಾದ ಉದ್ದಿಮೆಗಳಿಗೆ ಪುನಃ ವಹಿವಾಟು ಆರಂಭಿಸಲು ನೆರವಾಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು 2020ರ ಮೇ ತಿಂಗಳಲ್ಲಿ ‘ತುರ್ತು ಸಾಲ ಖಾತರಿ ಯೋಜನೆ’ (ಇಸಿಎಲ್ಜಿಎಸ್) ಆರಂಭಿಸಿತು. ಎಂಎಸ್ಎಂಇ ವಲಯದ ಅರ್ಹ ಉದ್ದಿಮೆಗಳಿಗೆ ಇದು ನೆರವು ಒದಗಿಸಿತು.

ಈ ಯೋಜನೆಯು ಅರ್ಥವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಿಗೆ ಅನ್ವಯಆಗುವಂತಿತ್ತು. ಯೋಜನೆಯ ಅಡಿಯಲ್ಲಿ ಅರ್ಹ ಉದ್ಯಮಗಳಿಗೆ ನೀಡಿದ ಸಾಲಕ್ಕೆ ಶೇ 100ರಷ್ಟು ಖಾತರಿ ಒದಗಿಸಲಾಗಿತ್ತು.

ಯೋಜನೆಯ ಅಡಿಯಲ್ಲಿ ನೀಡುವ ಸಾಲದ ಬಡ್ಡಿಗೆ ಮಿತಿ ನಿಗದಿ ಮಾಡಲಾಗಿತ್ತು. ಅಲ್ಲದೆ, ಸಾಲದ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಪ್ರಕ್ರಿಯಾ ಶುಲ್ಕಗಳನ್ನು ಮನ್ನಾ ಮಾಡಲಾಗಿತ್ತು, ಅವಧಿಗೆ ಮೊದಲೇ ಸಾಲ ಮರುಪಾವತಿ ಮಾಡಿದಲ್ಲಿ ಅದಕ್ಕೆ ಶುಲ್ಕ ವಿಧಿಸುತ್ತಿರಲಿಲ್ಲ. ಈ ಯೋಜನೆಯು 2023ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿತ್ತು.

ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ಇರಾನ್ ವಿರುದ್ಧ ಸಮರ ಆರಂಭಿಸಿದ ನಂತರದಲ್ಲಿ ಕಚ್ಚಾ ತೈಲದ ಬೆಲೆಯು ಸರಿಸುಮಾರು ಶೇ 50ರಷ್ಟು ಜಾಸ್ತಿಯಾಗಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡಚಣೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.