ನವದೆಹಲಿ: ಎಲ್ಪಿಜಿ ದಾಸ್ತಾನು ಪ್ರಮಾಣವನ್ನು ಕನಿಷ್ಠ 30 ದಿನಗಳ ಬೇಡಿಕೆಗೆ ಆಗುವ ಮಟ್ಟಕ್ಕೆ ಹೆಚ್ಚಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ತೈಲೋತ್ಪನ್ನಗಳ ಮಾರಾಟ ಕಂಪನಿಗಳಿಗೆ ಸೂಚನೆ ನಿಡಿದೆ.

‘ಇಂಧನ ದಾಸ್ತಾನು ಘಟಕಗಳ ವಿಚಾರವಾಗಿ ನಾವು ಒಂದಿಷ್ಟು ಕೆಲಸ ಮಾಡುತ್ತಿದ್ದೇವೆ. ಕನಿಷ್ಠ ಮೂವತ್ತು ದಿನಗಳಿಗೆ ಆಗುವಷ್ಟು ಎಲ್ಪಿಜಿ ದಾಸ್ತಾನು ಇರಿಸಿಕೊಳ್ಳುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ. ಆ ದಿಸೆಯಲ್ಲಿ ಅವು ಕೆಲಸ ಮಾಡುತ್ತಿವೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಾಣಿಜ್ಯ ಉದ್ದೇಶದಿಂದ ಇರಿಸಿಕೊಳ್ಳುವ ದಾಸ್ತಾನು ಅಲ್ಲದೆ, ಹೆಚ್ಚುವರಿಯಾಗಿ ದಾಸ್ತಾನು ಇರಿಸಿಕೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡುವಂತೆ ಕೇಂದ್ರ ಸರ್ಕಾರವು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ಗೆ ಸೂಚನೆ ನೀಡಿದೆ.

ಕಚ್ಚಾ ತೈಲದ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕೂಡ ಕೇಂದ್ರ ಸರ್ಕಾರವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸುಜಾತಾ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.

ದೇಶದ ಹಲವು ಪೆಟ್ರೋಲ್ ಬಂಕ್ಗಳಲ್ಲಿ ಅಸಹಜ ಪ್ರಮಾಣದಲ್ಲಿ ಮಾರಾಟ ಚಟುವಟಿಕೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೃಷಿ ವಲಯದಿಂದ ಬರುತ್ತಿರುವ ಬೇಡಿಕೆಯು ಇಂಧನ ಮಾರಾಟ ಜಾಸ್ತಿ ಆಗಲು ಒಂದು ಕಾರಣವಾಗಿದೆ. ಇಂಧನ ಸಗಟು ಖರೀದಿದಾರರು ಕೂಡ ಬೆಲೆ ವ್ಯತ್ಯಾಸದ ಕಾರಣದಿಂದಾಗಿ ಸರ್ಕಾರಿ ಪೆಟ್ರೋಲ್ ಬಂಕ್ಗಳ ಕಡೆ ಬರುತ್ತಿರುವುದು ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದಿದ್ದಾರೆ.

ದೇಶದ 150ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಪೆಟ್ರೋಲ್ ಮಾರಾಟವು ಶೇ 30ಕ್ಕಿಂತ ಜಾಸ್ತಿ ಆಗಿದೆ. 14 ಜಿಲ್ಲೆಗಳಲ್ಲಿ ಇಂಧನ ಮಾರಾಟವು ದುಪ್ಪಟ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.