ನವದೆಹಲಿ: ಹತ್ತಿಯ ಆಮದು ಮೇಲಿನ ಎಲ್ಲ ಸುಂಕಗಳಿಗೆ ಅಕ್ಟೋಬರ್ 30ರವರೆಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ದೇಶದ ಜವಳಿ ಉದ್ಯಮಕ್ಕೆ ಅಗತ್ಯ ಪ್ರಮಾಣದಲ್ಲಿ ಹತ್ತಿಯ ಲಭ್ಯತೆಯನ್ನು ಖಾತರಿಪಡಿಸಲಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಹೇಳಿದೆ.

ಅಲ್ಲದೆ, ಸುಂಕ ವಿನಾಯಿತಿ ಕ್ರಮದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಇರಲಿದೆ, ದೇಶದ ಜವಳಿ ಉತ್ಪನ್ನಗಳ ಸ್ಪರ್ಧಾತ್ಮಕತೆಯು ಹೆಚ್ಚಲಿದೆ ಎಂದು ಸಚಿವಾಲಯ ಹೇಳಿದೆ.

ಸುಂಕ ವಿನಾಯಿತಿಯು ಬಹಳ ಅಗತ್ಯವಾಗಿದ್ದ ಕ್ರಮವಾಗಿತ್ತು ಎಂದು ಉದ್ಯಮದ ಪ್ರಾತಿನಿಧಿಕ ಸಂಘಟನೆಗಳು ಹೇಳಿವೆ. ‘ಕೇಂದ್ರದ ಕ್ರಮವು ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ಉದ್ಯಮಕ್ಕೆ ಹತ್ತಿಯ ಲಭ್ಯತೆಯನ್ನು ಹೆಚ್ಚು ಮಾಡಲಿದೆ’ ಎಂದು ಉಡುಪುಗಳ ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ) ಹೇಳಿದೆ.

ಆಮದು ಸುಂಕ ವಿನಾಯಿತಿಯು ಜೂನ್ 1ರಿಂದ ಅನ್ವಯ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ಹೇಳಿದೆ.

ಈಗ ಕೇಂದ್ರ ತೆಗೆದುಕೊಂಡಿರುವ ಕ್ರಮವು ದೇಶದ ರೈತರ ಹಿತಾಸಕ್ತಿಯನ್ನೂ ಮಾರುಕಟ್ಟೆ ಸ್ಥಿರತೆಯನ್ನೂ ರಕ್ಷಿಸುವಂತೆ ಇದೆ ಎಂದು ಜವಳಿ ಸಚಿವಾಲಯ ಅಭಿಪ್ರಾಯಪಟ್ಟಿದೆ.

‘ಹತ್ತಿಯ ಆಮದಿನ ಮೇಲೆ ಶೇ 11ರಷ್ಟು ಸುಂಕ ವಿಧಿಸಲಾಗಿತ್ತು. ಈ ಕ್ರಮವು ಭಾರತದ ಜವಳಿ ಮತ್ತು ಸಿದ್ಧ ಉಡುಪು ಉದ್ಯಮಕ್ಕೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಅಡ್ಡಿಯಾಗಿ ಪರಿಣಮಿಸಿತ್ತು. ಏಕೆಂದರೆ ಏಷ್ಯಾದ ನಮ್ಮ ಪ್ರತಿಸ್ಪರ್ಧಿ ದೇಶಗಳು ಸುಂಕ ರಹಿತವಾಗಿ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದವು’ ಎಂದು ಭಾರತೀಯ ಜವಳಿ ಉದ್ದಿಮೆಗಳ ಒಕ್ಕೂಟದ (ಸಿಐಟಿಐ) ಅಧ್ಯಕ್ಷ ಅಶ್ವಿನ್ ಚಂದ್ರನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.