ನವದೆಹಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಶೇಕಡ 20ರಷ್ಟು ವಾಣಿಜ್ಯ ಎಲ್ಪಿಜಿ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ಶನಿವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗುವ ವಾಣಿಜ್ಯ ಬಳಕೆ ಎಲ್ಪಿಜಿ ಪ್ರಮಾಣವು ಶೇ 50ಕ್ಕೆ ಏರಿಕೆ ಆಗಿದೆ.

ದೇಶದಲ್ಲಿ ಎಲ್ಪಿಜಿ ಉತ್ಪಾದನೆ ಹೆಚ್ಚಳ ಕಂಡಿರುವುದು ಪರಿಸ್ಥಿತಿ ಒಂದಿಷ್ಟು ತಿಳಿಯಾಗುವುದಕ್ಕೆ ಸಹಕಾರಿ ಆಗಿದೆ. ಪಶ್ಚಿಮ ಏಷ್ಯಾದಲ್ಲಿ ಮೂರು ವಾರಗಳಿಂದ ನಡೆಯುತ್ತಿರುವ ಯುದ್ಧವು ಭಾರತದಲ್ಲಿ ಎಲ್ಪಿಜಿ ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಮನೆಗಳಿಗೆ ಎಲ್ಪಿಜಿ ಪೂರೈಕೆಗೆ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭದಲ್ಲಿ ವಾಣಿಜ್ಯ ಘಟಕಗಳಿಗೆ ಎಲ್ಪಿಜಿ ಪೂರೈಕೆ ನಿಲ್ಲಿಸಿತು. ನಂತರ ಅವುಗಳಿಗೆ ಬೇಡಿಕೆಯ ಶೇ 20ರಷ್ಟನ್ನು ಪೂರೈಸಲಾಯಿತು.

ಇದಾದ ನಂತರದಲ್ಲಿ, ಪಿಎನ್ಜಿ ಯೋಜನೆಗಳಿಗೆ ವೇಗ ನೀಡುವ ರಾಜ್ಯಗಳಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ವಾಣಿಜ್ಯ ಎಲ್ಪಿಜಿ ಕೊಡುವುದಾಗಿ ಕೇಂದ್ರ ಪ್ರಕಟಿಸಿತು.

ಈಗ, ಆದ್ಯತಾ ವಲಯಗಳಾದ ರೆಸ್ಟಾರೆಂಟ್, ಹೋಟೆಲ್, ಕೈಗಾರಿಕಾ ಕ್ಯಾಂಟೀನ್ಗಳು, ಆಹಾರ ಸಂಸ್ಕರಣಾ ಘಟಕಗಳು, ಸಮುದಾಯ ಅಡುಗೆಮನೆಗಳು ಮತ್ತು ಸಬ್ಸಿಡಿ ದರದಲ್ಲಿ ಆಹಾರ ಪೂರೈಕೆ ಮಾಡುವ ಘಟಕಗಳಿಗೆ ಎಲ್ಪಿಜಿ ಪೂರೈಕೆಯನ್ನು ಶೇ 20ರಷ್ಟು ಹೆಚ್ಚಿಸಲಾಗುತ್ತದೆ ಎಂದು ಕೇಂದ್ರವು ಶನಿವಾರ ತಿಳಿಸಿದೆ.

ಆದರೆ, ತೈಲೋತ್ಪನ್ನಗಳ ಮಾರಾಟ ಕಂಪನಿಗಳ ಜೊತೆ ನೋಂದಣಿ ಮಾಡಿಸಿಕೊಂಡಿರುವ ಹಾಗೂ ಪಿಎನ್ಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ ವಾಣಿಜ್ಯ ಘಟಕಗಳಿಗೆ ಹೆಚ್ಚಿನ ಎಲ್ಪಿಜಿ ಹಂಚಿಕೆಯ ಪ್ರಯೋಜನ ಲಭ್ಯವಾಗಲಿದೆ.

ಮನೆಬಳಕೆ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಅಡ್ಡಿ ಉಂಟಾಗಿಲ್ಲ, ವಿತರಕರ ಹಂತದಲ್ಲಿ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರದ ಹೇಳಿಕೆಯೊಂದು ತಿಳಿಸಿದೆ. ಜನರು ಭೀತಿಗೆ ಒಳಗಾಗಿ ಎಲ್ಪಿಜಿ ಬುಕ್ ಮಾಡುವುದು ತಗ್ಗಿದೆ ಎಂದು ಕೂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.