ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ: ರಾಜ್ಯಕ್ಕೆ ₹ 8,633 ಕೋಟಿ ಬಿಡುಗಡೆ– ಕೇಂದ್ರ

Last Updated 1 ಜೂನ್ 2022, 19:34 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತ ₹ 86,912 ಕೋಟಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದರಲ್ಲಿ ಕರ್ನಾಟಕ ರಾಜ್ಯದ ಪಾಲು ₹ 8,633 ಕೋಟಿ ಇದೆ.

ಮಹಾರಾಷ್ಟ್ರ ರಾಜ್ಯಕ್ಕೆ ಅತಿ ಹೆಚ್ಚಿನ ₹ 14,145 ಕೋಟಿ ಜಿಎಸ್‌ಟಿ ಪರಿಹಾರ ದೊರೆತಿದೆ.

ಒಟ್ಟಾರೆ ಮೊತ್ತದಲ್ಲಿ ₹ 25 ಸಾವಿರ ಕೋಟಿಯನ್ನು ಜಿಎಸ್‌ಟಿ ಪರಿಹಾರ ನಿಧಿಯಿಂದ ನೀಡಲಾಗಿದೆ. ಉಳಿದ ₹ 61,912 ಕೋಟಿಯನ್ನು ಕೇಂದ್ರವು ತನ್ನ ಸೆಸ್ ಸಂಗ್ರಹದಿಂದ ನೀಡಿದೆ ಎಂದು ಹಣಕಾಸು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆ ಮೊತ್ತದಲ್ಲಿ ಏಪ್ರಿಲ್‌–ಮೇ ಅವಧಿಗೆ ₹ 17,973 ಕೋಟಿ ಹಾಗೂ ಫೆಬ್ರುವರಿ–ಮಾರ್ಚ್‌ ಅವಧಿಗೆ ₹ 21,322 ಕೋಟಿ ಹಾಗೂ 2022ರ ಜನವರಿವರೆಗೆ ಬಾಕಿ ಉಳಿಸಿಕೊಂಡಿದ್ದ ₹ 47,617 ಕೋಟಿ ಮೊತ್ತವು ಸೇರಿಕೊಂಡಿದೆ ಎಂದು ಅದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT