ಸೋಮವಾರ, ಜೂಲೈ 13, 2020
28 °C

₹ 3 ಲಕ್ಷ ಕೋಟಿ ಹೆಚ್ಚುವರಿ ಕೊಡುಗೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮುಂಬೈ: ದೇಶಿ ಆರ್ಥಿಕತೆಯು ಕೊರೊನಾಗೆ ಸಂಬಂಧಿಸಿದ ಬಿಕ್ಕಟ್ಟುಗಳಿಂದ ಹೊರಬರಲು ₹ 3 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ಕೊಡುಗೆ  ಘೋಷಿಸುವಂತೆ ಎಸ್‌ಬಿಐನ ಆರ್ಥಿಕ ತಜ್ಞರು ಒತ್ತಾಯಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿರುವ ₹ 1.75 ಲಕ್ಷ ಕೋಟಿ ಕೊಡುಗೆಯಲ್ಲಿ ₹ 73 ಸಾವಿರ ಕೋಟಿ ಮಾತ್ರವೇ ಹೊಸದಾಗಿದ್ದು, ಉಳಿದ ಮೊತ್ತವೆಲ್ಲವೂ ಬಜೆಟ್‌ನಲ್ಲಿಯೇ ಘೋಷಿಸಿದ್ದಾಗಿದೆ. ಹೀಗಾಗಿ ಸದ್ಯದ ಬಿಕ್ಕಟ್ಟನ್ನು ಎದುರಿಸಲು ಭಾರಿ ಮೊತ್ತದ ವಿತ್ತೀಯ ಕೊಡುಗೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್‌ ಸೋಂಕಿಗೆ ಒಳಗಾಗಿರುವ 284 ಜಿಲ್ಲೆಗಳಲ್ಲಿಯೇ ಬ್ಯಾಂಕಿಂಗ್‌ ವಲಯದ ಶೇ 98ರಷ್ಟು ಸಾಲ ಇದೆ. ಹೀಗಾಗಿ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆಯೂ ಸರ್ಕಾರ ಸೂಕ್ಷ್ಮವಾಗಿ ಗಮನ ಹರಿಸಬೇಕಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು