ಚಾಮರಾಜನಗರ: ಜಿಲ್ಲಾ ವಿತರಕರ ಸಂಘವನ್ನು ವಿಸ್ತರಣೆ ಮಾಡಿ ಸಂಘಟಿತಗೊಳಿಸಿ ಕೈಗಾರಿಕೆಗಳ ಜೊತೆ ಉತ್ತಮ ಸಂಬಂಧ ಹೊಂದುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ವಿ.ಪ್ರಭಾಕರ್ ಸಲಹೆ ನೀಡಿದರು.

ಜಿಲ್ಲಾ ವಿತರಕರ ಸಂಘದ ವತಿಯಿಂದ ಈಚೆಗೆ ನಗರದ ವರ್ತಕರ ಭವನದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಿ ಮಹೋತ್ಸವ ಹಾಗೂ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರಕು ಸೇವೆಗಳು ಅಥವಾ ಉತ್ಪನ್ನಗಳನ್ನು ತಯಾರಕರಿಂದ ಗ್ರಾಹಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿತಕರು ಸಂಘಟಿತರಾಗಗಬೇಕು. ಜಿಲ್ಲೆಯನ್ನು ಪ್ರಮುಖ ವ್ಯಾಪಾರ ಕೇಂದ್ರವಾಗಿಸಿಕೊಂಡರೆ ಆರ್ಥಿಕವಾಗಿ ಬಲಗೊಳ್ಳಬಹುದು ಎಂದರು.

ಜಿಲ್ಲಾ ಕೇಂದ್ರದ ಸಮೀಪ 1,200 ಎಕರೆಯಲ್ಲಿ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಇರುವ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದ್ದು, ಪ್ರತಿದಿನ ನೂರಾರು ಲಾರಿಗಳು ಸರಕುಗಳನ್ನು ಸಾಗಿಸುತ್ತಿವೆ. 800 ಎಕರೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು ವಿತರಕರು ಸಂಘಟಿತರಾದರೆ ದೇಶದಾದ್ಯಂತ ಸರಕು ಸಾಗಾಟ ಮಾಡುವ ಮಟ್ಟಕ್ಕೆ ಬೆಳೆಯಬಹುದು. ಸಂಘಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಅಗತ್ಯ ಸಹಕಾರ ನೀಡಲಿದೆ ಎಂದರು. ಸಂಘ 25 ವರ್ಷ ಪೂರೈಸಿ ಮುನ್ನುಗ್ಗುತ್ತಿರುವುದು ಶ್ರದ್ಧೆ, ಸೇವೆ, ಒಗ್ಗಟ್ಟಿನ ಪ್ರತೀಕವಾಗಿದ್ದು ಮತ್ತಷ್ಟು ಬಲಗೊಳಿಸಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಗೆ ಮಾದರಿ ಸಂಘವಾಗಿ ರೂಪಿಸಬೇಕು ಎಂದು ಶುಭ ಹಾರೈಸಿದರು.

ವರ್ತಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಿ.ಪಿ.ಪದ್ಮಪ್ರಸಾದ್ ಮಾತನಾಡಿ, ಸರಕುಗಳ ವಿತರಣೆ ಕಾರ್ಯ ಮಹತ್ವ ಹಾಗೂ ಜವಾಬ್ದಾರಿಯುತ ಕೆಲಸವಾಗಿದೆ. ಡಿಜಿಟಲ್ ಯುಗದಲ್ಲಿ ಎದುರಾಗಿರುವ ಹಲವು ಸವಾಲುಗಳನ್ನು ಎದರಿಸಿ ಮುನ್ನಡೆಯಬೇಕು ಎಂದರು.

ವರ್ತಕರ ಸಂಘದ ಅಧ್ಯಕ್ಷ ಶಂಕರ್, ಮಾಜಿ ಅಧ್ಯಕ್ಷ ಕೆ.ಎಂ.ಓಂಪ್ರಕಾಶ್ ಮಾತನಾಡಿದರು. ವಿತರಕರ ಸಂಘದ ಅಧ್ಯಕ್ಷ ಎನ್.ರಾಘವೇಂದ್ರ ರಾವ್ ಮಾತನಾಡಿ ಸರ್ವರ ಸಹಕಾರದಿಂದ ಸಂಘ 25 ವರ್ಷ ಪೂರೈಸಿದ್ದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾತಿ ತಿಳಿಸಿದರು.

ಉಪಾಧ್ಯಕ್ಷ ಜಿ.ನಾಗರಾಜು ಮಾತನಾಡಿ, ಮುಂದಿನ ಪೀಳಿಗೆಗಾಗಿ ಸಂಘವನ್ನು ಮತ್ತಷ್ಟು ಬಲಪಡಿಸಬೇಕಾಗಿದ್ದು ಹೆಚ್ಚಿನ ಸದಸ್ಯತ್ವ ನೋಂದಣಿಯಾಗಲಿ ಎಂದರು. ಮಾಜಿ ಅಧ್ಯಕ್ಷ ಕೆ.ಎಂ.ಓಂಪ್ರಕಾಶ್, ಮಾಜಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ, ಮಧು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತ. ಗುರುಪ್ರಸಾದ್ ವಂದಿಸಿದರು, ಅಜಯ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು, ಕುಟುಂಬಸ್ಥರು, ವ್ಯಾಪಾರಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-37-1894322209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.