ಚಾಮರಾಜನಗರ: ಬಿರು ಬಿಸಿಲು, ನೀರಿನ ಕೊರತೆ, ಇಳುವರಿ ಕುಸಿತದ ಪರಿಣಾಮ ತರಕಾರಿಗಳ ದರ ಗಗನಕ್ಕೇರುತ್ತಿದೆ. ತಿಂಗಳ ಹಿಂದೆ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಟೊಮೆಟೊ ದರ ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಬರೋಬ್ಬರಿ 60ಕ್ಕೆ ಮಾರಾಟವಾಗುತ್ತಿದೆ.

ದಿಢೀರ್ ದರ ಹೆಚ್ಚಳಕ್ಕೆ ಕಾರಣ: ಮಾರ್ಚ್ 17ರಂದು ಚಾಮರಾಜನಗರ ಸಹಿತ ಹಾಸನ, ರಾಯಚೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿದು ತರಕಾರಿ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿತ್ತು. ಆಲಿಕಲ್ಲಿನ ಹೊಡೆತಕ್ಕೆ ಟೊಮೆಟೊ ಬೆಳೆ ನೆಲಕಚ್ಚಿತ್ತು. ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ಟೊಮೆಟೊ ಮಾರುಕಟ್ಟೆಗೆ ಪೂರೈಕೆಯಾಗಿದ್ದರಿಂದ ಬೆಲೆ ಹೆಚ್ಚಳವಾಗಿರಲಿಲ್ಲ. ಬದಲಾಗಿ ತೀವ್ರ ಕುಸಿತ ಕಂಡಿತ್ತು.

ಇದೀಗ ಹೊರ ರಾಜ್ಯಗಳಿಂದಲೂ ಪೂರೈಕೆ ತಗ್ಗಿರುವುದು ಹಾಗೂ ರಾಜ್ಯದಲ್ಲಿ ಬೇಡಿಕೆಯಷ್ಟು ಟೊಮೆಟೊ ಲಭ್ಯವಿಲ್ಲದಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್.

ಮೂರ್ನಾಲ್ಕು ತಿಂಗಳುಗಳಿಂದ ಟೊಮೆಟೊ ದರ ಪಾತಾಳಕ್ಕಿಳಿದಿದ್ದರಿಂದ ಸತತ ನಷ್ಟ ಅನುಭವಿಸಿ ಬೇಸತ್ತಿದ್ದ ರೈತರು ಟೊಮೆಟೊ ಬೆಳೆಯಲು ಉತ್ಸಾಹ ತೋರದಿರುವುದು ಕೂಡ ದರ ಹೆಚ್ಚಳಕ್ಕೆ ಪ್ರಮುಖ ಕಾರಣ. ಮಳೆ ಕೊರತೆಯಾಗಿರುವುದು, ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದು ಕೂಡ ದರ ಏರಿಳಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.

ಗುಣಮಟ್ಟ ಕುಸಿತ: ಬೆಲೆ ಹೆಚ್ಚಾಗಿದ್ದರೂ ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೊ ಪೂರೈಕೆಯಾಗುತ್ತಿಲ್ಲ. ಸಣ್ಣ ಗಾತ್ರದ ಹಣ್ಣುಗಳೇ ಹೆಚ್ಚಾಗಿ ಬರುತ್ತಿವೆ. ಪೂರೈಕೆ ಹೆಚ್ಚಾಗದಿದ್ದರೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಮಾರಾಟಗಾರ ಪುಟ್ಟಸ್ವಾಮಿ.

ಬೀನ್ಸ್ ದುಬಾರಿ: ಬೀನ್ಸ್ ಕೆ.ಜಿಗೆ ಬರೋಬ್ಬರಿ ₹ 120 ದಾಟಿದ್ದು ಗ್ರಾಹಕರ ಜೇಬಿಗೆ ಬಾರವಾಗಿದೆ. ಕಳೆದ ವಾರ 80ರ ಆಸುಪಾಸಿನಲ್ಲಿದ್ದ ಬೀನ್ಸ್ ಪ್ರಸ್ತುತ ಶತಕದ ಗಡಿ ದಾಟಿ ಮುನ್ನುಗ್ಗುತ್ತಿದೆ. ಮದುವೆ, ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿರುವುದು ಬೀನ್ಸ್ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಈರುಳ್ಳಿ ಅಗ್ಗ: ಕಳೆದ ಒಂದೆರಡು ತಿಂಗಳಿನಿಂದ ಈರುಳ್ಳಿಯ ಬೆಲೆ ಕುಸಿತವಾಗಿದ್ದು ಕೆ.ಜಿಗೆ 20ಕ್ಕೆ ಸಿಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ 100ಕ್ಕೆ 6 ಕೆ.ಜಿಯಷ್ಟು ಈರುಳ್ಳಿ ಧಾರಣೆ ನಡೆಯುತ್ತಿದೆ. ಬೆಳ್ಳುಳ್ಳಿ ದರ ಅಲ್ಪ ಹೆಚ್ಚಾಗಿದ್ದು ಕೆ.ಜಿಗೆ 160 ಇದೆ.

ಬೇಸಗೆ ಹಿನ್ನೆಲೆಯಲ್ಲಿ ಹಣ್ಣುಗಳ ದರ ದುಬಾರಿಯಾಗಿದ್ದು ಸೇಬು ಕೆ.ಜಿಗೆ 250, ದ್ರಾಕ್ಷಿ 150, ದಾಳಿಂಬೆ 200, ಕಿತ್ತಳೆ 100, ಪಪ್ಪಾಯ 30, ಕಲ್ಲಂಗಡಿ 30, ಪೈನಾಪಲ್ 80, ಏಲಕ್ಕಿ ಬಾಳೆಹಣ್ಣು 80 ಇದೆ.

ಮಾರುಕಟ್ಟೆಗೆ ಮಾವು ಲಗ್ಗೆ; ಮಾವಿನ ಸೀಸನ್ ಈಗಷ್ಟೆ ಆರಂಭವಾಗಿದ್ದು ಸೇಂಧೂರ, ರಸಪೂರಿ ಹಾಗೂ ತೋತಾಪುರಿ ತಳಿಯ ಮಾವುಗಳಷ್ಟೆ ಕಾಲಿಟ್ಟಿವೆ. ಬಾದಾಮಿ, ಮಲ್ಲಿಕಾ, ಬಾಗನ್ಪಲ್ಲಿ ಸಹಿತ ಇತರೆ ತಳಿಗಳು ಬರಬೇಕಿದೆ. ಸೇಂಧೂರ 120, ರಸಪೂರಿ 140, ತೋತಾಪುರಿ 100 ದರ ಇದೆ. ಮಾವು ಪೂರ್ಣಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಬಳಿಕ ಬೆಲೆ ಇಳಿಕೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-37-1733795110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.