ಚಾಮರಾಜನಗರ: ಮಾರುಕಟ್ಟೆಯಲ್ಲಿ ಗಗನಕ್ಕೇರಿದ್ದ ಬೀನ್ಸ್ ಬೆಲೆ ಅಲ್ಪ ಕುಸಿತ ಕಂಡಿದೆ. ಶತಕದ ಗಡಿ ದಾಟಿ ಗ್ರಾಹಕರಲ್ಲಿ ಆತಂಕ ಹುಟ್ಟಿಸಿದ್ದ ಬೀನ್ಸ್ ಕೆ.ಜಿಗೆ 60ಕ್ಕೆ ಇಳಿಕೆಯಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೀನ್ಸ್ಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದರಿಂದ ದರ ಹೆಚ್ಚಾಗಿತ್ತು. ಹಬ್ಬ ಮುಗಿಯುತ್ತಿದ್ದಂತೆ ಬೆಲೆ ಇಳಿಮುಖವಾಗಿದ್ದು ಮಾರುಕಟ್ಟೆಗೆ ಪೂರೈಕೆ ಹೆಚ್ಚಾದರೆ ದರ ಇನ್ನಷ್ಟು ಇಳಿಯುವ ಸಾಧ್ಯತೆಗಳಿವೆ.

ವಾರದ ಹಿಂದೆ ಬೇಸಗೆಯ ಧಗೆ ಹಾಗೂ ತರಕಾರಿ ಬೆಳೆಗೆ ನೀರಿನ ಕೊರತೆ ಎದುರಾಗಿದ್ದರಿಂದ ಬೆಲೆ ಏರುಮುಖವಾಗಿತ್ತು. ಈಚೆಗೆ ರಾಜ್ಯದ ಹಲವೆಡೆ ಸುರಿದ ಭಾರಿ ಮಳೆಯಿಂದ ನೀರಿನ ಕೊರತೆ ಅಲ್ಪ ನೀಗಿದ್ದು ದರ ಇಳಿಮುಖವಾಗಿದೆ. ಜೊತೆಗೆ ಹೋಟೆಲ್ಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಕೊರತೆಯಿಂದ ತರಕಾರಿಗಳ ಬಳಕೆ ಕಡಿಮೆಯಾಗಿರುವುದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಕ್ಯಾರೆಟ್ ಅಗ್ಗ: ಚಿಲ್ಲರೆ ಮಾರುಕಟ್ಟೆಯಲ್ಲಿ ಕ್ಯಾರೆಟ್ ಬೆಲೆ ಪಾತಾಳಕ್ಕೆ ಕುಸಿದಿದ್ದು ಕೆ.ಜಿಗೆ 15 ರಿಂದ 20ಕ್ಕೆ ಸಿಗುತ್ತಿದೆ. ಟೊಮೆಟೊ ಕೂಡ ಅಗ್ಗವಾಗಿದ್ದು ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ಕೆ.ಜಿಗೆ 10 ರಿಂದ 20ರವರೆಗೆ ದರ ಇದೆ. ಈರುಳ್ಳಿ ದರ ಅಲ್ಪ ಹೆಚ್ಚಾಗಿದ್ದು ಕಳೆದ ವಾರ ಕೆ.ಜಿಗೆ 20ಕ್ಕೆ ಸಿಗುತ್ತಿದ್ದ ಈರುಳ್ಳಿ 25ಕ್ಕೆ ಏರಿಕೆಯಾಗಿದೆ. ಉಳಿದಂತೆ ಬದನೆ, ಗೆಡ್ಡೆಕೋಸು, ಬೀಟ್ರೂಟ್, ಮೂಲಂಗಿ ಸಹಿತ ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ.

ಮೊಟ್ಟೆ ದರ ಇಳಿಕೆ: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಒಂದು ಮೊಟ್ಟೆಗೆ ₹ 7 ರಿಂದ ₹ 8ರವರೆಗೆ ದರ ಇತ್ತು. ಯುದ್ಧದ ಕಾರ್ಮೋಡ ಕವಿಯುತ್ತಿದ್ದಂತೆ ಕೊಲ್ಲಿ ರಾಷ್ಟ್ರಗಳಿಗೆ ಮೊಟ್ಟೆ ರಫ್ತು ನಿಂತುಹೋದ ಪರಿಣಾಮ ದರ ಕುಸಿತವಾಗಿದ್ದು ಒಂದು ಮೊಟ್ಟೆಗೆ ₹ 5.50 ರಿಂದ ₹ 6ರವರೆಗೆ ಇದೆ. ಬೆಲೆ ಇಳಿಕೆ ಮೊಟ್ಟೆಪ್ರಿಯರಿಗೆ ಖುಷಿ ತಂದಿದೆ.

ಹಣ್ಣುಗಳ ದರ ಹೆಚ್ಚಳ: ಬೇಸಗೆಯ ದಗೆ ಹೆಚ್ಚಾಗಿರುವುದರಿಂದ ಜ್ಯೂಸ್ ಸೆಂಟರ್ಗಳಲ್ಲಿ ತಂಪು ಪಾನೀಯಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ಬಹುತೇಕ ಹಣ್ಣುಗಳ ದರ ಏರಿಕೆಯಾಗಿದೆ. ಸೇಬು 200 ರಿಂದ 220, ಕಲ್ಲಂಗಡಿ ಕೆ.ಜಿಗೆ 25 ರಿಂದ 30, ಕಿತ್ತಳೆ, ಮೋಸಂಬಿ 100, ದ್ರಾಕ್ಷಿ 200, ಪಪ್ಪಾಯ 30, ಏಲಕ್ಕಿ ಬಾಳೆಹಣ್ಣು 80 ಇದೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆ, ಸತ್ತಿ ರಸ್ತೆ, ಗುಂಡ್ಲುಪೇಟೆಗೆ ಸಾಗುವ ರಸ್ತೆಗಳ ಇಕ್ಕೆಗಳಲ್ಲಿ ಪೈನಾಪಲ್, ಕಲ್ಲಂಗಡಿ, ಪಪ್ಪಾಯ ಹಾಗೂ ಕರಬೂಜ ಹಣ್ಣುಗಳ ಮಾರಾಟ ಜೋರಾಗಿದೆ. ವಾತಾವರಣದಲ್ಲಿ ಉಷ್ಠಾಂಶ ಹೆಚ್ಚಾಗುತ್ತಿದ್ದಂತೆ ಕಲ್ಲಂಗಡಿ, ಎಳನೀರಿಗೆ ಬೇಡಿಕೆ ಸೃಷ್ಟಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-37-320688890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.