ಚಾಮರಾಜನಗರ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಏರಿಳಿತ ಕಂಡಿದೆ. ಬೀನ್ಸ್ ಬೆಲೆ ಮತ್ತೆ ಹೆಚ್ಚಾದರೆ, ನುಗ್ಗೆ ಬೆಲೆ ಕುಸಿತ ಕಂಡಿದೆ. ಬೇಸಿಗೆಯ ಧಗೆಗೆ ತಂಪುಪಾನೀಯ ಹಾಗೂ ಹಣ್ಣುಗಳ ದರ ಹೆಚ್ಚಾಗಿದ್ದು ಗ್ರಾಹಕರ ಜೇಬಿಗೆ ಭಾರವಾಗಿದೆ.

ಕಳೆದ ವಾರ ಬೀನ್ಸ್ ದರ ₹ 50ಕ್ಕೆ ಇಳಿಕೆಯಾಗಿತ್ತು. ಈ ವಾರ ದರ ಏರುಮುಖವಾಗಿದ್ದು ಕೆ.ಜಿಗೆ ₹80 ಮುಟ್ಟಿದೆ. ಇಳುವರಿ ಕುಸಿತ, ಬೇಡಿಕೆಯ ಪರಿಣಾಮ ಬೆಲೆ ಏರಿಳಿತವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾರುಕಟ್ಟೆಗೆ ನುಗ್ಗೆ ಪೂರೈಕೆ ಹೆಚ್ಚಾಗಿರುವುದರಿಂದ ದರ ಇಳಿಮುಖವಾಗಿದೆ. ತಿಂಗಳ ಹಿಂದೆ ಕೆ.ಜಿಗೆ ಗರಿಷ್ಠ ₹ 200 ತಲುಪಿದ್ದ ನುಗ್ಗೆ ಪ್ರಸ್ತುತ ₹50ಕ್ಕೆ ಕುಸಿತ ಕಂಡಿದೆ. ಸದಾ ಗಗನಮುಖಿಯಾಗುತ್ತಿದ್ದ ನುಗ್ಗೆ ಬೆಲೆ ಇಳಿದಿರುವದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹದೇವಪ್ಪ.

ಕ್ಯಾರೆಟ್ ದರ ಕುಸಿತ: ಸಾಂಬಾರ್, ಪಲ್ಯ ಹಾಗೂ ಸಿಹಿ ಪದಾರ್ಥಗಳ ತಯಾರಿಕೆಗೆ ಹೆಚ್ಚು ಬಳಕೆಯಾಗುವ ಕ್ಯಾರೆಟ್ ಬೆಲೆ ತೀವ್ರ ಕುಸಿತ ಕಂಡಿದೆ. ಒಂದು ತಿಂಗಳಿನಿಂದಲೂ ದರ ಕೆ.ಜಿಗೆ ₹ 20 ರಿಂದ ₹ 30ರ ಆಸುಪಾಸಿನಲ್ಲಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕ್ಯಾರೆಟ್ ಪೂರೈಕೆ ಹೆಚ್ಚಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಟೊಮೆಟೊ ಅಗ್ಗ: ಟೊಮೆಟೊ ದರ ಕೂಡ ಅಗ್ಗವಾಗಿದ್ದು ಗುಣಮಟ್ಟ ಹಾಗೂ ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹10 ರಿಂದ ₹20ಕ್ಕೆ ಸಿಗುತ್ತಿದೆ. ಟೊಮೆಟೊ ಬೆಳೆ ವಿಸ್ತರಣೆ, ಉತ್ತಮ ಇಳುವರಿ, ಬೇಡಿಕೆಗಿಂತ ಹೆಚ್ಚು ಪೂರೈಕೆಯಾಗಿರುವುದರಿಂದ ದರ ಕನಿಷ್ಠಮಟ್ಟಕ್ಕೆ ಕುಸಿದಿದೆ. ಒಂದು ತಿಂಗಳಿನಿಂದಲೂ ದರ ಬಹುತೇಕ ಸ್ಥಿರವಾಗಿದೆ.

ಬೆಳ್ಳುಳ್ಳಿ ದುಬಾರಿ: ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬೆಳ್ಳುಳ್ಳಿ ದರ ಹೆಚ್ಚಾಗಿದೆ. ದಪ್ಪ ಎಸಳುಗಳುಳ್ಳ ಬೆಳ್ಳುಳ್ಳಿ ಗಡ್ಡೆಗಳಿಗೆ ಕೆ.ಜಿಗೆ ₹200ರವರೆಗೆ ದರ ಇದ್ದರೆ, ಸಣ್ಣ ಹಾಗೂ ಮಧ್ಯಮಗಾತ್ರದ ಗಡ್ಡೆಗಳಿಗೆ ₹140 ರಿಂದ ₹160ರವರೆಗೆ ಬೆಲೆ ಇದೆ. ಬೆಳ್ಳುಳ್ಳಿ ಏರುಗತಿಯಲ್ಲಿದ್ದರೆ ಈರುಳ್ಳಿ ಮಾತ್ರ ಇಳಿಮುಖವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹20 ರಿಂದ ₹25ಕ್ಕೆ ದೊರೆಯುತ್ತಿದೆ. ಸಾಂಬಾರ್ ಈರುಳ್ಳಿ (ಸಣ್ಣ ಈರುಳ್ಳಿ) ದರವೂ ಕುಸಿದಿದ್ದು ಕೆ.ಜಿಗೆ ₹25 ರಿಂದ ₹30ರವರೆಗೆ ಇದೆ.

ಹಣ್ಣಿಗೆ ಭಾರಿ ಡಿಮ್ಯಾಂಡ್: ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ಹಣ್ಣುಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ತಂಪು ಪಾನೀಯಗಳ ತಯಾರಿಕೆಗೆ ಪ್ರಮುಖವಾಗಿ ಬಳಸುವ ಕಲ್ಲಂಗಡಿ, ಕರಬೂಜ, ಅನಾನಸು, ಕಪ್ಪು ದ್ರಾಕ್ಷಿ, ಮೋಸಂಬಿ, ಕಿತ್ತಳೆ ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಿದೆ. ಕಲ್ಲಂಗಡಿ ಕೆ.ಜಿಗೆ ₹25 ರಿಂದ ₹30 ಇದ್ದರೆ, ಕಪ್ಪು ದ್ರಾಕ್ಷಿ ₹220 ರಿಂದ ₹260, ಹಸಿರು ದ್ರಾಕ್ಷಿ ₹160 ರಿಂದ ₹180, ಅನಾನಸಿಗೆ ಕೆ.ಜಿಗೆ ₹50 ರಿಂದ ₹80, ಕಿತ್ತಳೆ ₹80 ರಿಂದ ₹100, ಕರಬೂಜ ₹40ರಿಂದ ₹50ರ ಆಸುಪಾಸಿನಲ್ಲಿದೆ. ಬಾಳೆ ಹಣ್ಣಿನ ದರ ಇಳಿಕೆಯಾಗಿದ್ದು ಕೆ.ಜಿಗೆ ₹50 ರಿಂದ ₹60ರವರೆಗೆ ಇದೆ.

ಎಳನೀರಿಗೂ ಬೇಡಿಕೆ ಹೆಚ್ಚಾಗಿದ್ದು ದರ ಒಂದಕ್ಕೆ ₹60ಕ್ಕೆ ಜಿಗಿದಿದೆ. ನಗರದ ಬೈಪಾಸ್ ರಸ್ತೆ, ವೃತ್ತ, ಆಸ್ಪತ್ರೆ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳ ಬಳಿ ವ್ಯಾಪಾರ ಜೋರಾಗಿ ನಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-37-924200344

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.