ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಕ್ಕಮಗಳೂರು ಟೌನ್ ಕೊ– ಆಪರೇಟಿವ್ ಸೊಸೈಟಿ ಷೇರುದಾರರಿಗೆ ‘ಸಹಕಾರಿ ಆ್ಯಪ್’ ಪರಿಚಯಿಸಲಾಗಿದೆ ಎಂದು ಚಿಕ್ಕಮಗಳೂರು ಟೌನ್ ಕೊ– ಆಪರೇಟಿವ್ ಸೊಸೈಟಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.

ಒಂದು ವರ್ಷದ ಅವಧಿಯೊಳಗೆ ಜನಸ್ನೇಹಿ ಆಡಳಿತ ನೀಡಲಾಗಿದೆ. ಸಂಘದ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಷೇರುದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಮಾಡಲಾಗಿದೆ. ಗ್ರಾಹಕರಿಗೆ ನೇರವಾಗಿ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ನಮ್ಮ ಸಂಘದಿಂದ ಚೆಕ್ ಮೂಲಕ ಸಾಲ ವಿತರಿಸಲಾಗುತ್ತಿತ್ತು. ಆದರೆ, ಈಗ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮತ್ತು ನೆಫ್ಟ್ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಸಾಲ ವಸೂಲಿಗೆ ರಶೀದಿ ನೀಡಲಾಗುತ್ತಿತ್ತು. ಈಗ ಮೊಬೈಲ್ ಆ್ಯಪ್ ಮೂಲಕ ಪಾರದರ್ಶಕವಾಗಿ ವಸೂಲಿ ಮಾಡಲಾಗುತ್ತಿದೆ ಎಂದರು.

ಕಳೆದ ವರ್ಷ ಸಹಕಾರ ಸಂಘದ ಚುನಾವಣೆಯ ವೇಳೆ ನೀಡಿದ್ದ ಭರವಸೆ ಈಡೇರಿಸಲಾಗಿದೆ. ಪೂರ್ವ ಸಾಲಿನ ಹಳೆಯ ಕಟ್ಟಡವನ್ನು ತೆರವು ಮಾಡಿ ನೂತನ ಕಟ್ಟಡ ಪ್ರಾರಂಭ ಮಾಡಲಾಗಿದೆ. ಕಟ್ಟಡ ಪೂರ್ಣಗೊಂಡ ನಂತರ ಬಾಡಿಗೆ ನೀಡಿದ್ದಲ್ಲಿ ಹೊಸ ಹಾಗೂ ಹಳೆಯ ಕಟ್ಟಡದ ಬಾಡಿಗೆ ಸೇರಿ ಸುಮಾರು₹70 ಲಕ್ಷ ವಾರ್ಷಿಕ ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಂಘದಲ್ಲಿ ಕಳೆದ 15 ವರ್ಷಗಳಿಂದ ಬಾಕಿ ಉಳಿದ ಸಾಲ ₹1.5 ಕೋಟಿ ವಸೂಲಿ ಮಾಡಲಾಗಿದೆ. 125 ಜನ ಸಾಲಗಾರರನ್ನು ಸಂಘಕ್ಕೆ ಕರೆಸಿ ಅವರೊಂದಿಗೆ ಚರ್ಚಿಸಿ ಅವರಿಂದ ಬರಬೇಕಾದ ಸಾಲ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಟೌನ್ ಕೊ–ಆಪರೇಟಿವ್ ಸೊಸೈಟಿ ಸದಸ್ಯರಾಗ ಬಯಸುವವರು ಸಂಘದ ಕಚೇರಿಯಲ್ಲಿ ಮಾಹಿತಿ ಹಾಗೂ ಅರ್ಜಿ ಪಡೆದು ಕೆ.ವೈ.ಸಿ ದಾಖಲಾತಿ ನೀಡಿ ಸದಸ್ಯತ್ವ ಪಡೆಯಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಹಾಲಮ್ಮ ರಾಮಚಂದ್ರ, ನಿರ್ದೇಶಕರಾದ ಕೇಶವಮೂರ್ತಿ, ಬಿ.ಎಸ್.ಪ್ರಶಾಂತ್, ಕುಮಾರ್, ಸಿ.ಡಿ.ರಘು, ಗಂಗಾಧರ್, ಈಶ್ವರಪ್ಪ, ಕೆ.ಪಿ.ಪರಮೇಶ್, ಕಾರ್ಯದರ್ಶಿ ಗಾಯತ್ರಿ, ಮಾರಾಟಗಾರ ಮಧು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-665854705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.