ಹೆತ್ತೂರು: ನಮ್ಮದೇ ಆದ ಉತ್ತಮ ಕಾಫಿ ಬ್ರಾಂಡ್ ನಿರ್ಮಿಸಿ ರೈತರ ಆದಾಯ ಹೆಚ್ಚಿಸುವ ಕೆಲಸವಾಗಬೇಕು. ‘ಹೆತ್ತೂರು’ ಹೆಸರಿನ ಕಾಫಿ ಬ್ರಾಂಡ್ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.

ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ಮಂಗಳವಾರ ಆಯೋಜಿಸಿದ್ದ ಹೆತ್ತೂರು ವೆಸ್ಟ್ರನ್ ಘಾಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಮ್ಮೆಲ್ಲರ ಕನಸಿನ ಕಂಪನಿಗೆ ಚಾಲನೆ ನೀಡಿದ್ದೇವೆ. ಮಗು ಜನಿಸಿದ ನಂತರ ಅದರ ಬೆಳವಣಿಗೆಯನ್ನು ಹೇಗೆ ಕಾಳಜಿಯಿಂದ ಗಮನಿಸುತ್ತೇವೋ, ಅದೇ ರೀತಿಯಲ್ಲಿ ಸಂಸ್ಥೆಯ ಬೆಳವಣಿಗೆಯ ಮೇಲೂ ಎಲ್ಲರೂ ಜವಾಬ್ದಾರಿಯುತ ಮನೋಭಾವದಿಂದ ಗಮನ ಹರಿಸಬೇಕು. ಶ್ರಮ, ನಂಬಿಕೆ, ಸಾಮರಸ್ಯ ಹಾಗೂ ಪಾರದರ್ಶಕತೆಯೇ ಯಾವುದೇ ಸಂಸ್ಥೆಯ ಯಶಸ್ಸಿನ ಮೂಲ ಆಧಾರಗಳಾಗಿವೆ ಎಂದು ಹೇಳಿದರು.

ಕಂಪನಿ ಸ್ಥಾಪನೆಯಾದ ಬಳಿಕ ಷೇರುದಾರರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಮನ್ವಯ ಕಾಪಾಡಿಕೊಳ್ಳಬೇಕು. ಹಣಕಾಸು ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ನಿರ್ದೇಶಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಹಣ ಬಂದ ನಂತರ ಯಾರೂ ಬದಲಾಗದೇ, ಪರಸ್ಪರ ನಂಬಿಕೆ ಮತ್ತು ಸೌಹಾರ್ದದಿಂದ ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಿಕೊಳ್ಳುವ ಸಾಮರ್ಥ್ಯ ಹೊಂದುವುದು ಕಂಪನಿ ಸ್ಥಾಪನೆಯ ಪ್ರಮುಖ ಉದ್ದೇಶ. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುತ್ತದೆ. ರೋಸ್ಟಿಂಗ್ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಸರ್ಕಾರದ ಸಬ್ಸಿಡಿ ಸಿಗುವ ಅವಕಾಶಗಳಿವೆ ಎಂದರು.

ಕಾಫಿ ಸೇವನೆಯ ಉಪಯೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕಾಫಿ ಬ್ರಾಂಡ್ ಅನ್ನು ನಾವೇ ಹೆಚ್ಚು ಉಪಯೋಗಿಸಬೇಕು. ಮೊದಲು ನಮ್ಮ ಮೇಲೆಯೇ ನಮಗೆ ನಂಬಿಕೆ ಇರಬೇಕು. ನಿರ್ದೇಶಕರು ಸಮಯಪ್ರಜ್ಞೆ ಹಾಗೂ ಶಿಸ್ತಿಗೆ ಹೆಚ್ಚಿನ ಮಹತ್ವ ನೀಡಬೇಕು. ಸಂಸ್ಥೆಯ ಸಬಲೀಕರಣ ಹಾಗೂ ರೈತಪರ ಚಟುವಟಿಕೆಗಳಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.

ಉದ್ಯಮಿ ಜಾಗಟೆ ಶಿವಕುಮಾರ್ ಮಾತನಾಡಿ, ಮಲೆನಾಡು ಪ್ರದೇಶವು ನೆಮ್ಮದಿ ಹಾಗೂ ಸುಂದರ ಬದುಕಿಗೆ ಹೆಸರಾಗಿದ್ದು, ಇಲ್ಲಿನ ಜನರು ಸರಳ ಹಾಗೂ ಸುಖಸಂಪನ್ನ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿಯಲ್ಲಿ ಬದಲಾವಣೆಗಳಾಗುತ್ತಿದ್ದು, ಕಾಲಕ್ಕೆ ಅನುಗುಣವಾಗಿ ಇನ್ನಷ್ಟು ಸಂಘ-ಸಂಸ್ಥೆಗಳು ಸ್ಥಾಪನೆ ಅಗತ್ಯವಿದೆ ಎಂದರು.

ವಿದೇಶಗಳಲ್ಲಿ ಇಂತಹ ಸಂಸ್ಥೆಗಳು ಬಹಳ ಹಿಂದಿನಿಂದಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹೆತ್ತೂರಿನಲ್ಲಿಯೂ ಇಂತಹ ಸಂಸ್ಥೆ ಆರಂಭವಾಗಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಆಂಧ್ರಪ್ರದೇಶದಲ್ಲಿ ತಮ್ಮ ಎಫ್ಬಿಒ ಕಂಪನಿಯನ್ನು ಯಶಸ್ವಿಯಾಗಿ ಕಟ್ಟಿದ ಅನುಭವವನ್ನು ಸತ್ಯನಾರಾಯಣ ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷ ಎಚ್.ಟಿ. ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ಕಾಫಿ ಮಂಡಳಿಯ ಸಿಇಒ ಡಾ.ಕೂರ್ಮಾರಾವ್ ಮಾತನಾಡಿದರು. ಭಾರತೀಯ ಕಾಫಿ ಮಂಡಳಿಯ ಸಲಹೆಗಾರ ಡಾ. ನವೀನ್, ಎಚ್ಡಿಪಿಎ ಉಪಾಧ್ಯಕ್ಷ ಸಚಿನ್, ಸಂಸ್ಥೆಯ ನಿರ್ದೇಶಕ ನಾಗಭೂಷಣ, ಮುರಳಿ, ರವಿಕುಮಾರ್, ಕವನ್, ಕಾಫಿ ಬೆಳೆಗಾರರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-36-933330806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.