ಚಿಕ್ಕೋಡಿ: ‘ಅರಿಹಂತ ಸಕ್ಕರೆ ಕಾರ್ಖಾನೆಯು ಆಧುನಿಕ ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ದಕ್ಷ ನಿರ್ವಹಣೆಯಿಂದ ಮಾದರಿಯಾಗಿದೆ. ಸಕ್ಕರೆ ಉತ್ಪಾದನೆ, ಇಂಧನ ಉಳಿತಾಯ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಕಾರ್ಖಾನೆ ಅತ್ಯುತ್ತಮ ಕೆಲಸ ಮಾಡಿದ್ದರಿಂದ ಇಂತಹದೊಂದು ಪ್ರಶಸ್ತಿ ಬರಲು ಸಾಧ್ಯವಾಗಿದೆ‘ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲ್ಲೂಕಿನ ಜೈನಾಪೂರ ಗ್ರಾಮದ ಅರಿಹಂತ ಸಕ್ಕರೆ ಕಾರ್ಖಾನೆಗೆ 2025ನೇ ,ಸಾಲಿನ ಅತ್ಯುತ್ತಮ ತಾಂತ್ರಿಕ ಸಕ್ಕರೆ ಕಾರ್ಖಾನೆ ಪ್ರಶಸ್ತಿಯನ್ನು ಬೆಳಗಾವಿ ನಗರದ ಎಸ್ ನಿಜಲಿಂಗಪ್ಪ ಶುಗರ್ ಇನ್ಸಿಟಿಟ್ಯೂಟ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಮಾತನಾಡಿದರು.

‘ಆಧುನಿಕ ಯಂತ್ರೋಪಕರಣಗಳ ಬಳಕೆ, ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟದ ಸಕ್ಕರೆ ಉತ್ಪಾದನೆಯಿಂದ ಹೆಸರು ಮಾಡಿದೆ‘ ಎಂದರು. ಕಾರ್ಖಾನೆಯ ಅಧ್ಯಕ್ಷ ಉತ್ತಮ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಭಿನಂದನ ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಕಬ್ಬು ಆಯುಕ್ತ ಗೋವಿಂದ ರೆಡ್ಡಿ, ನಿರ್ದೇಶಕ ಗೋಪಾಲ ರಾಜು, ಗೊಬ್ಬರ ಇಲಾಖೆ ನಿರ್ದೇಶಕ ರಾಮಣ್ಣ ಕಟ್ಟಿ, ಕಾರ್ಖಾನೆ ಸಿಇಒ ಮಹಾವೀರ ಪಾಟೀಲ, ಸಚಿನ ಹಂಚಿನಾಳೆ, ಅಪ್ಪಾಸಾಹೇಬ ಕೇಸ್ತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-21-80506804

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.