ಚಿಕ್ಕೋಡಿ: ‘ಜೊಲ್ಲೆ ಗ್ರುಪ್ ಅಂಗಸಂಸ್ಥೆಯಾದ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ) 2025–26ರ ಆರ್ಥಿಕ ವರ್ಷದಲ್ಲಿ ₹51.04 ಕೋಟಿ ಲಾಭ ಗಳಿಸಿದೆ’ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿಯ ಮುಖ್ಯಶಾಖೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘2026ರ ಆರ್ಥಿಕ ವರ್ಷದ ಅಂತ್ಯಕ್ಕೆ ಸೊಸೈಟಿಯು ₹5,183 ಕೋಟಿ ಠೇವಣಿ ಸಂಗ್ರಹಿಸಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಒಟ್ಟು 233 ಶಾಖೆಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲೇ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ’ ಎಂದರು.

‘ಪ್ರಸ್ತುತ ಸಂಸ್ಥೆಯಲ್ಲಿ 4.45 ಲಕ್ಷ ಸದಸ್ಯರಿದ್ದು, ₹37.21 ಕೋಟಿ ಷೇರು ಬಂಡವಾಳ, ₹ 244.25 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, ₹3,838.84 ಕೋಟಿ ಸಾಲ ಮತ್ತು ಮುಂಗಡಗಳು, ₹1,487.90 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ, ₹5,839.26 ಕೋಟಿ ವರ್ಕಿಂಗ್ ಕ್ಯಾಪಿಟಲ್ ಹೊಂದಿದೆ. ಈ ಮೂಲಕ ಸಂಸ್ಥೆಯು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿ ಪ್ರಾಮಾಣಿಕತೆಯಿಂದ ಉತ್ತಮ ಸಾಧನೆ ಮಾಡುತ್ತಿದೆ’ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಸಿನ ತಾಂಬೋಳೆ, ಶ್ರೀನಿವಾಸ ಕರಾಳೆ, ನಿಂಗಪ್ಪ ಖೋಕಲೆ, ಕಾಶಿನಾಥ ಕಮತೆ, ಅಪ್ಪಾಸಾಹೇಬ ಚೌಗಲಾ, ದತ್ತಾತ್ರೇಯ ಪಾಟೀಲ, ಸದಾನಂದ ಹಳಿಂಗಳಿ, ಚೇತನ ದೇಶಪಾಂಡೆ, ವಿಭಾವರಿ ಖಾಂಡಕೆ, ಪ್ರಭಾರ ಪ್ರದಾನ ವ್ಯ ವಸ್ಥಾಪಕ ಬಹದ್ದೂರ್ ಗುರವ, ಉಪಪ್ರಧಾನ ಮಹಾದೇವ ಮಂಗಾವತೆ, ರಮೇಶ ಕುಂಬಾರ, ಸುರೇಶ ಮಾನೆ, ಶಿವಪುತ್ರ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-21-1036535040

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.