ಚಿಕ್ಕೋಡಿ: ಪಟ್ಟಣದ ಶ್ರೀ ಶಾಂತಪ್ಪಣ್ಣಾ ಮಿರಜಿ ಅರ್ಬನ್ ಕೋ– ಆಪ್ ಬ್ಯಾಂಕ್ 2025–26ನೇ ವರ್ಷಾಂತ್ಯಕ್ಕೆ ₹ 2.34 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಭಾತೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿ.ಶಾಂತಪ್ಪಣ್ಣಾ ಮಿರಜಿ ಅವರು ಹುಟ್ಟು ಹಾಕಿದ ಈ ಸಂಸ್ಥೆಯು ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಯನ್ನು ಸುಧಾರಣೆ ಮಾಡುತ್ತಲೇ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ. ಸಂಸ್ಥೆಯು 13,562 ಸದಸ್ಯರನ್ನು ಹೊಂದಿದ್ದು, ₹ 10.05 ಕೋಟಿ ಷೇರು ಬಂಡವಾಳ ಹೊಂದಿದೆ. ₹ 55 ಕೋಟಿ ಸ್ವಂತ ನಿಧಿ ಇದ್ದು, ₹ 294.75 ಕೋಟಿ ಠೇವು ಸಂಗ್ರಹಿಸಿದೆ. ₹ 178.23 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ವಸೂಲಾತಿ ಪ್ರಮಾಣ ಶೇ 96ರಷ್ಟಿದೆ. ಒಟ್ಟು ಗುಂತಾವಣೆ ₹ 155.52 ಕೋಟಿ, ₹ 2.34 ಕೋಟಿ ನಿವ್ವಳ ಲಾಭ ಹೊಂದಿದೆ’ ಎಂದರು.

ನಿರ್ದೇಶಕರಾದ ಮಹಾವೀರ ಮಿರಜಿ, ಅಶೋಕ ದಾನವಾಡೆ, ಮಹೇಶ ಲಡಗೆ, ಅನಿಲ ಸದಲಗೆ, ಈರಪ್ಪ ಹಂಪಣ್ಣವರ, ಯಶವಂತ ಮಿರಜೆ, ರವಿಕುಮಾರ ರೋಖಡೆ, ಪ್ರದಾನ ವ್ಯವಸ್ಥಾಪಕ ಆರ್.ಎಸ್. ವಂದೂರೆ, ಎಸ್.ಬಿ. ಕೋಟಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-209268266

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.