ಏರ್ಫೋರ್ಸ್ ಒನ್: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಶೃಂಗಸಭೆಯ ಬೆನ್ನಲ್ಲೇ, ದಶಕದ ಬಳಿಕ ಚೀನಾಕ್ಕೆ 200 ವಿಮಾನಗಳನ್ನು ಪೂರೈಸಲು ಬೋಯಿಂಗ್ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕದ ವೈಮಾನಿಕ ಕಂಪನಿಯ ದೀರ್ಘಕಾಲಿಕ ಬೆಳವಣಿಗೆಯಿಂದ ಈ ಒಪ್ಪಂದವು ಮಹತ್ವದ್ದೆನಿಸಿದೆ.

ಬೀಜಿಂಗ್ ಪ್ರವಾಸ ಮುಗಿಸಿಕೊಂಡು, ಅಮೆರಿಕಕ್ಕೆ ಹಿಂತಿರುಗುವ ವೇಳೆ ‘ಏರ್ಫೋರ್ಸ್ ಒನ್’ ವಿಮಾನದಲ್ಲಿ ಪತ್ರಕರ್ತರ ಜೊತೆ ಮಾತ ನಾಡಿದ ಅವರು, ‘ಒಪ್ಪಂದದ ಭಾಗವಾಗಿ 750 ಬೋಯಿಂಗ್ ವಿಮಾನ ಖರೀದಿಸುವ ಹಕ್ಕನ್ನು ಚೀನಾ ಕಾಯ್ದಿರಿಸಿದೆ. ಈ ಪೈಕಿ 200 ವಿಮಾನಗಳ ಪೂರೈಕೆಗೆ ಖರೀದಿ ಆದೇಶವನ್ನು ಚೀನಾದಿಂದ ಪಡೆಯಲಾಗಿದೆ ಎಂದು ಬೋಯಿಂಗ್ ಸಂಸ್ಥೆ ತಿಳಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಟ್ರಂಪ್ ಅವರು ಬೀಜಿಂಗ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬೋಯಿಂಗ್ ಕಂಪನಿಯ ಸಿಇಒ ಕೆಲ್ಲಿ ಒಟ್ಬರ್ಗ್ ಸೇರಿದಂತೆ ಅಮೆರಿಕದ ಪ್ರಮುಖ ಕಂಪನಿಗಳ ಸಿಇಒಗಳು ಜೊತೆಗೂಡಿದ್ದರು. ಆ ಮೂಲಕ ತಮ್ಮ ಉತ್ಪನ್ನ ಗಳನ್ನು ಚೀನಾದಲ್ಲಿ ಮಾರುವ ಉತ್ಸಾಹ ವ್ಯಕ್ತಪಡಿಸಿದ್ದರು.

ಈ ಒಪ್ಪಂದದಿಂದ ಜನರಲ್ ಎಲೆಕ್ಟ್ರಿಕ್ ಕಂಪನಿಗೂ ಕೂಡ ಉಪಯೋಗವಾ ಗಲಿದ್ದು, ಈ ಸಂಸ್ಥೆಯು ಚೀನಾಕ್ಕೆ 400ರಿಂದ 450 ಎಂಜಿನ್ ಗಳನ್ನು ಪೂರೈಸಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

‘ಕಳೆದ ತಿಂಗಳು ಟ್ರಂಪ್ ಹಾಗೂ ಷಿ ಭೇಟಿಯಾಗಿ ವ್ಯಾಪಾರ ಒಪ್ಪಂದ ಕುರಿತಂತೆ ಮಾತುಕತೆ ನಡೆಸಿದ ವೇಳೆ ಬೋಯಿಂಗ್ ಪಾಲಿಗೆ ಅರ್ಥಪೂರ್ಣವಾದ ಅವಕಾಶ ದೊರೆಯಲಿದೆ’ ಎಂದು ಕೆಲ್ಲಿ ಒರ್ಟ್ಬರ್ಗ್ ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.