ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಹಡಗುಗಳ ಸಂಚಾರ ವಿಳಂಬವಾಗುತ್ತಿದೆ. ಜೊತೆಗೆ ದೇಶದ ಕಂಪನಿಗಳಿಗೆ ಪ್ರಮುಖ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಭಾನುವಾರ ಹೇಳಿದೆ.

ಸಂಘರ್ಷದಿಂದ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಮತ್ತು ಜಾಗತಿಕ ಪೂರೈಕೆ ವ್ಯವಸ್ಥೆಗೆ ಅಡ್ಡಿ ಉಂಟುಮಾಡಿದೆ. ಕಂಪನಿಗಳು ಇದರ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿವೆ ಎಂದು ಸಿಐಐನ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಇಂಧನ ಮಾರುಕಟ್ಟೆ ಮತ್ತು ವ್ಯಾಪಾರದ ಮೇಲೂ ಸಂಘರ್ಷವು ಒತ್ತಡ ಸೃಷ್ಟಿಸಿದೆ. ಇದರಿಂದ ಆಮದು ಮತ್ತು ರಫ್ತು ವಲಯವು ಪರಿಣಾಮ ಅನುಭವಿಸುತ್ತಿದ್ದು, ತಯಾರಿಕಾ ವಲಯದ ಕೈಗಾರಿಕೆಗಳಲ್ಲಿ ಇದರ ಪರಿಣಾಮ ಕಂಡು ಬರುತ್ತಿದೆ ಎಂದು ಸಿಐಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.