ಬೆಂಗಳೂರು: ತಾಯಂದಿರಿಗೆ ತಮ್ಮ ಮಾತೃತ್ವ ರಜೆ ಪೂರ್ಣಗೊಂಡ ನಂತರ ಒಂದು ವರ್ಷದ ಅವಧಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಸಿಟಿಬ್ಯಾಂಕ್ ಕಲ್ಪಿಸಿದೆ.
‘ಕೇಂದ್ರ ಸರ್ಕಾರದ ಸೂಚನೆಗೆ ಅನುಗುಣವಾಗಿ, ತಾಯಂದಿರಿಗೆ ಈ ರೀತಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿರುವ ಮುಂಚೂಣಿ ಸಂಸ್ಥೆಗಳ ಪೈಕಿ ಸಿಟಿಬ್ಯಾಂಕ್ ಒಂದು’ ಎಂದು ಪ್ರಕಟಣೆ ತಿಳಿಸಿದೆ.
‘ಮಹಿಳೆಯರನ್ನು ಉದ್ಯೋಗದಲ್ಲಿ ಉಳಿಸಿಕೊಳ್ಳಲು ಹಾಗೂ ಅವರ ವೃತ್ತಿ ಬದುಕಿಗೆ ನೆರವಾಗಲು ಇದೊಂದು ಬಹುದೊಡ್ಡ ಹೆಜ್ಜೆ’ ಎಂದು ಸಿಟಿ ಇಂಡಿಯಾ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆದಿತ್ಯ ಮಿತ್ತಲ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.