ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಉಳಿಸುವ ಮಾರ್ಗ

Last Updated 24 ಏಪ್ರಿಲ್ 2019, 5:28 IST
ಅಕ್ಷರ ಗಾತ್ರ

ಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಯು ತೆರಿಗೆ ಪಾವತಿಸಲೇಬೇಕು. ನೌಕರರ ಸಂಬಳದ ಮೊತ್ತದಲ್ಲಿ ತೆರಿಗೆ ಕಡಿತ ಮಾಡುವ ಅಧಿಕಾರವನ್ನು ಕೆಲಸ ಕೊಟ್ಟಿರುವ ಕಂಪನಿಗಳು ಹೊಂದಿರುತ್ತವೆ. ವಾರ್ಷಿಕ ಆದಾಯ ತೆರಿಗೆ ಮಿತಿಗಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಯು ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಲೇಬೇಕಾಗುತ್ತದೆ. ಹೀಗಾಗಿ, ಉದ್ಯೋಗಿಗಳು ತಮ್ಮ ಹಣವನ್ನು ಸಾಧ್ಯವಾದಷ್ಟು ಉಳಿತಾಯ ಮಾಡುವುದು ಸೂಕ್ತ. ನ್ಯಾಯಸಮ್ಮತವಾಗಿ ತೆರಿಗೆಯಿಂದ ವಿನಾಯಿತಿ ಪಡೆಯಲು ಅರ್ಹರಿದ್ದಾಗ ಅದರ ಲಾಭ ಪಡೆದು ಹಣವನ್ನು ಉಳಿತಾಯ ಮಾಡಬಹುದು.

ಸಂಬಳದಾರರು ವೈಯಕ್ತಿಕವಾಗಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಲ್ಲ ಮಾರ್ಗಗಳು ಇಲ್ಲಿವೆ.

ಸ್ಟ್ಯಾಂಡರ್ಡ್ ಡಿಡಕ್ಷನ್‌

ನೀವು ವೈಯಕ್ತಿಕ ಸಂಬಳದಾರರಾಗಿದ್ದರೆ, ನಿಮ್ಮ ಒಟ್ಟು ಆದಾಯದಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮೂಲಕ ₹ 40,000 ತೆರಿಗೆ ವಿನಾಯಿತಿ ಪಡೆಯಬಹುದು.

ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 2018ರ ಬಜೆಟ್ (2018-19ರ ಆರ್ಥಿಕ ವರ್ಷದಿಂದ) ನಲ್ಲಿ ಮರು ಪರಿಚಯಿಸಲಾಗಿದೆ. ಅದರನ್ವಯ ವೈದ್ಯಕೀಯ ಭತ್ಯೆ ₹ 15,000 ಹಾಗೂ ಸಾರಿಗೆ ಭತ್ಯೆ ₹ 19,200 ಕ್ಲೇಮ್ ಮಾಡಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ನೀವು ಆನ್ ಲೈನ್ ಮೂಲಕ ತೆರಿಗೆ ರಿಟರ್ನ್ಸ್ (ಐಟಿ ರಿಟರ್ನ್ಸ್) ಮಾಡಿದ್ದರೆ ಸ್ವಯಂಚಾಲಿತವಾಗಿ ಸ್ವೀಕರಿಸಲಾಗುತ್ತದೆ. ಸಂತಸದ ವಿಚಾರ ಏನೆಂದರೆ 2019ರ ಬಜೆಟ್ ನಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ₹ 50,000ಕ್ಕೆ ಏರಿಸಲಾಗಿದೆ. 2019-20ರ ಆರ್ಥಿಕ ವರ್ಷದಿಂದ ಇದು ಅನ್ವಯವಾಗಲಿದೆ.

ಬಾಡಿಗೆ ಪಾವತಿಯ ಪೂರ್ತಿ ಲಾಭ ಪಡೆಯಿರಿ

ಬಾಡಿಗೆ ಮನೆಯಲ್ಲಿ ವಾಸವಿರುವ ಸಂಬಳದಾರರು ಅಥವಾ ಉದ್ಯೋಗಿಗಳಿಗೆ ಎಚ್.ಆರ್.ಎ ವರದಾನವಾಗಿದೆ. ಉದ್ಯೋಗಿಯ ಸಂಬಳದ ವೇತನದ ವಿವರಗಳ ಪ್ರಕಾರ ಎಚ್.ಆರ್.ಎ ದಾಖಲೆಗಳನ್ನು ನೀಡಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ನೀವು ಬಾಡಿಗೆ ಪಾವತಿಸದೆ ಕಂಪನಿ ವತಿಯಿಂದ ಎಚ್.ಆರ್.ಎ ಪಡೆಯುತ್ತಿದ್ದರೆ ನಿಮ್ಮ ಎಚ್.ಆರ್.ಎ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.

ಆದಾಯ ತೆರಿಗೆಯಲ್ಲಿ ಎಚ್.ಆರ್.ಎ ವಿನಾಯಿತಿ ಪಡೆಯಬೇಕಾದರೆ ಉದ್ಯೋಗಿ ಅಥವಾ ಸಂಬಳದಾರರು ಬಾಡಿಗೆ ರಶೀದಿಯನ್ನು ತಾನು ಕೆಲಸ ಮಾಡುತ್ತಿರುವ ಕಂಪನಿಗೆ ನೀಡಬೇಕು. ನಿಮ್ಮ ಬಾಡಿಗೆ ಮಿತಿ ಒಂದು ಲಕ್ಷ ರೂಪಾಯಿ ಮೀರಿದ್ದರೆ ಮನೆ ಮಾಲೀಕರ ಪ್ಯಾನ್ ಕಾರ್ಡ್ ಅನ್ನು ಬಾಡಿಗೆ ರಶೀದಿ ಜೊತೆಗೆ ಕಂಪನಿಗೆ ಸಲ್ಲಿಸಬೇಕು.

ಬಾಡಿಗೆ ಮನೆಯಲ್ಲಿ ನೀವು ವಾಸ ಮಾಡಿದ ಅವಧಿಯ ವರೆಗಷ್ಟೇ ಪಾವತಿಸಿದ ತೆರಿಗೆಯನ್ನು ಕ್ಲೇಮ್ ಮಾಡಿಕೊಳ್ಳಬಹುದು. ಡಿಡಕ್ಷನ್ ಆದ ಅಥವಾ ಆಗುವ ಮೊತ್ತದ ವಿವರ ಈ ಕೆಳಗಿನಂತಿದೆ.

ವಾಸ್ತವವಾಗಿ ಪಡೆಯುತ್ತಿರುವ ಎಚ್.ಆರ್.ಎ 2. ಸಂಬಳದ ಶೇಕಡ 50 ರಷ್ಟು (ಮೆಟ್ರೊ ಸಿಟಿಗಳಲ್ಲಿ) ಅಥವಾ ಸಂಬಳದ ಶೇಕಡ 40 ರಷ್ಟು (ನಾನ್ ಮೆಟ್ರೊ ಸಿಟಿಗಳಲ್ಲಿ). 3. ಸಂಬಳದ ಶೇಕಡ 10 ರಷ್ಟನ್ನು ಬಾಡಿಗೆಗೆ ಪಾವತಿಸಿರಬೇಕು.

* ಸಂಬಳ= ಮೂಲ ವೇತನ + ತುಟ್ಟಿಭತ್ಯೆ

ಸೆಕ್ಷನ್ ‘80’ ಸಿ ಸಮಗ್ರ ವಿವರ

ಸೆಕ್ಷನ್ ‘80 ಸಿ’ ಪ್ರಕಾರ, ನೀವು ₹ 1.5 ಲಕ್ಷದವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ತೆರಿಗೆ ಉಳಿತಾಯ ಅವಕಾಶಗಳಾದ ಪಿಪಿಎಫ್, ಎನ್‌ಪಿಎಸ್, ಟರ್ಮ್ ಡೆಪಾಸಿಟ್ಸ್, ಜೀವ ವಿಮೆಕಂತುಗಳು, ಇಎಲ್ಎಸ್ಎಸ್ ಫಂಡ್ಸ್, ಮಕ್ಕಳ ಟ್ಯೂಷನ್ ಶುಲ್ಕ ಕಟ್ಟುತ್ತಿದ್ದರೆ ಹಾಗೂ ಗೃಹ ಸಾಲ ಪಡೆದಿದ್ದರೆ ಈ ಸೌಲಭ್ಯ ಪಡೆಯಬಹುದು.

ಹೂಡಿಕೆ ಮಾಡುವ ಮೂಲಕ₹ 46,800 ವರೆಗೆ ನೀವು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು. ಆದಾಯ ತೆರಿಗೆ ಉಳಿತಾಯವಷ್ಟೇ ಅಲ್ಲ ನಿಮ್ಮ ಭವಿಷ್ಯಕ್ಕೂ ಈ ಹಣ ನೆರವಿಗೆ ಬರುತ್ತದೆ.

ಎಲ್‌ಟಿಎ ಬಿಲ್‌

ಒಬ್ಬ ಸಂಬಳದಾರರಾಗಿ ನೀವು ಲೀವ್ ಟ್ರಾವೆಲ್ ಅಲೊವನ್ಸ್‌ನ (ಎಲ್.ಟಿ.ಎ) ಬಿಲ್‌ಗಳನ್ನು ಸಲ್ಲಿಸುವ ಮೂಲಕ ಆದಾಯ ತೆರಿಗೆ ಕಾಯ್ದೆ ಪ್ರಕಾರ ತೆರಿಗೆ ಉಳಿಸಬಹುದು.

ದೇಶದೊಳಗೆ ಪ್ರಯಾಣ ಮಾಡಿದ ಸಾರಿಗೆ ವೆಚ್ಚ ಅಥವಾ ಟಿಕೆಟ್‌ಗಳ ಪ್ರತಿಯನ್ನು ಸಲ್ಲಿಸುವ ಮೂಲಕ ಎಲ್.ಟಿ.ಎ ವಿನಾಯಿತಿ ಅಡಿ ತೆರಿಗೆ ಉಳಿತಾಯ ಮಾಡಬಹುದು.

ಕುಟುಂಬಕ್ಕೆ ವಿಮೆ ಮಾಡಿಸಿ ತೆರಿಗೆ ಉಳಿಸಿ

ಆರೋಗ್ಯ ವಿಮೆಯನ್ನು ನಿಮ್ಮ ಸಂಗಾತಿ ಹಾಗೂ ತಂದೆ-ತಾಯಿಗೆ ಮಾಡಿಸುವುದು ಒಳಿತು. ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯವನ್ನಷ್ಟೇ ಕಾಪಾಡುವುದಿಲ್ಲ. ಸೆಕ್ಷನ್ 80 ಡಿ ಪ್ರಕಾರ ಟ್ಯಾಕ್ಸ್ ಅನ್ನು ಸಹ ಉಳಿಸುತ್ತದೆ.

₹ 25,000 ಮೌಲ್ಯದ ಆರೋಗ್ಯ ವಿಮೆಯನ್ನು ನಿಮಗೆ, ನಿಮ್ಮ ಸಂಗಾತಿ ಹಾಗೂ ನಿಮ್ಮ ಮಕ್ಕಳಿಗೆ ಮಾಡಿಸಬಹುದು. ಇನ್ನೂ ಹೆಚ್ಚುವರಿ ಸೌಲಭ್ಯ ಪಡೆಯಲು ₹ 25,000 ಮೌಲ್ಯದ ಆರೋಗ್ಯ ವಿಮೆ ಕಂತನ್ನು ನಿಮ್ಮ ತಂದೆ-ತಾಯಿ ಅವರ ಹೆಸರಿನಲ್ಲಿ ಮಾಡಿಸಬಹುದು. ನಿಮ್ಮ ತಂದೆ-ತಾಯಿಗೆ 60 ವರ್ಷ ಆಗಿರಬೇಕು. ಆಗ ಒಟ್ಟು ₹ 50,000ಗಳ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

(ಲೇಖಕ: ಕ್ಲಿಯರ್ ಟ್ಯಾಕ್ಸ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT