ನವದೆಹಲಿ : ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಪ್ರತಿ ಕೆ.ಜಿಗೆ ಮತ್ತೆ ₹1ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಭಾನುವಾರದಿಂದಲೇ ಜಾರಿಗೆ ಬಂದಿದೆ.

ಇದು ವಾರದ ಅವಧಿಯಲ್ಲಿ ಎರಡನೇ ಬೆಲೆ ಏರಿಕೆ, ಗುರುವಾರವಷ್ಟೇ ಬೆಲೆಯನ್ನು ಕೆ.ಜಿಗೆ ₹2ರಷ್ಟು ಹೆಚ್ಚಿಸಲಾಗಿತ್ತು.

ದೆಹಲಿಯಲ್ಲಿ ಪ್ರಸ್ತುತ ಸಿಎನ್ಜಿ ದರ ಕೆ.ಜಿ.ಗೆ ₹80.09 ಆಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತಿಳಿಸಿದೆ.

ಕೊಳವೆ ಮೂಲಕ ಮನೆಗಳಿಗೆ ಪೂರೈಕೆ ಮಾಡುವ ಅಡುಗೆ ಅನಿಲದ (ಪಿಎನ್ಜಿ) ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ನ ಕಾರ್ಯವ್ಯಾಪ್ತಿಯಲ್ಲಿ ಸಿಎನ್ಜಿ ದರ ಹೆಚ್ಚಳ ಆಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದ್ರಪ್ರಸ್ಥ ಕಂಪನಿಯು ಉತ್ತರ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.