ರೂಪಾಯಿ ಕುಸಿತ ಬಿಕ್ಕಟ್ಟಿನ ಸಮರ್ಥ ನಿರ್ವಹಣೆ

7
ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅಭಿಮತ

ರೂಪಾಯಿ ಕುಸಿತ ಬಿಕ್ಕಟ್ಟಿನ ಸಮರ್ಥ ನಿರ್ವಹಣೆ

Published:
Updated:
Deccan Herald

ನವದೆಹಲಿ: ‘ವಿನಿಮಯ ಮಾರುಕಟ್ಟೆಯಲ್ಲಿನ ಯಾವುದೇ ಏರಿಳಿತವನ್ನು ಸಮರ್ಥವಾಗಿ ನಿಭಾಯಿಸುವಷ್ಟು ವಿದೇಶಿ ವಿನಿಮಯ ಸಂಗ್ರಹ ಇದೆ’ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಡಾಲರ್‌ ಎದುರು ರೂಪಾಯಿ ದಾಖಲೆ ಮಟ್ಟಕ್ಕೆ ಕುಸಿದಿರುವ ವಿದ್ಯಮಾನವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶಿ ಆರ್ಥಿಕತೆಯು ಇಂತಹ ಬಿಕ್ಕಟ್ಟನ್ನು ಎದುರಿಸುವಷ್ಟು ಸಮರ್ಥವಾಗಿದೆ. ಜಾಗತಿಕ ಮಾನದಂಡಗಳ ಅನ್ವಯ, ದೇಶದ ವಿದೇಶ ವಿನಿಮಯ ಸಂಗ್ರಹವು ತೃಪ್ತಿದಾಯಕ ಮಟ್ಟದಲ್ಲಿ ಇದೆ. ಕರೆನ್ಸಿಗಳ ವಿನಿಮಯ ದರದ ತೀವ್ರ ಏರಿಳಿತದಿಂದ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಜೇಟ್ಲಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಜಾಗತಿಕ ವಿದ್ಯಮಾನಗಳ ಅನಿಶ್ಚಿತತೆ ಕಾರಣದಿಂದ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ಟರ್ಕಿಯಲ್ಲಿನ ಆರ್ಥಿಕ ಬಿಕ್ಕಟ್ಟು, ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಕರೆನ್ಸಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ಡಾಲರ್‌ ಮೌಲ್ಯ ಏರುಗತಿಯಲ್ಲಿ ಇದೆ. ಕರೆನ್ಸಿ ಮಾರುಕಟ್ಟೆಯಲ್ಲಿನ ಏರಿಳಿತದ ತೀವ್ರತೆ ತಗ್ಗಿಸಲು ಅಗತ್ಯ ಬಿದ್ದರೆ, ತನ್ನ ಬಳಿ ಇರುವ ವಿದೇಶಿ ವಿನಿಮಯ ಸಂಗ್ರಹವನ್ನು ಬಳಸಲು ಸಿದ್ಧ ಇರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

**

₹ 27.40 ಲಕ್ಷ ಕೋಟಿ: ಆರ್‌ಬಿಐ ಬಳಿ ಇರುವ ವಿದೇಶಿ ವಿನಿಮಯ ಸಂಗ್ರಹ

6.7 %: ಏಪ್ರಿಲ್‌ನಿಂದೀಚೆಗೆ ಡಾಲರ್‌ ಎದುರಿನ ರೂಪಾಯಿ ಅಪಮೌಲ್ಯ

ರೂಪಾಯಿ ಮೌಲ್ಯದ ಏರಿಳಿತದ ಮೇಲೆ ತೀವ್ರ ನಿಗಾ

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !