ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರಲ್ಲಿ ಬಿಎಸ್‌ಎನ್‌ಎಲ್‌ 5ಜಿ: ವೈಷ್ಣವ್

Last Updated 5 ಜನವರಿ 2023, 14:19 IST
ಅಕ್ಷರ ಗಾತ್ರ

ಭುವನೇಶ್ವರ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ 2024ರಲ್ಲಿ 5ಜಿ ಸೇವೆಗಳನ್ನು ಆರಂಭಿಸಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ತಿಳಿಸಿದ್ದಾರೆ.

ಒಡಿಶಾದಲ್ಲಿ ಜಿಯೊ ಮತ್ತು ಏರ್‌ಟೆಲ್‌ ಕಂಪನಿಗಳ 5ಜಿ ಸೇವೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಬಿಎಸ್‌ಎನ್‌ಎಲ್‌ ತನ್ನ 4ಜಿ ಸೇವೆಗಳನ್ನು ಆರಂಭಿಸಲು ಟಿಸಿಎಸ್‌ ಮತ್ತು ಸಿ–ಡಾಟ್‌ ನೇತೃತ್ವದ ಒಕ್ಕೂಟದ ಹೆಸರನ್ನು ಅಂತಿಮ ಪಟ್ಟಿಗೆ ಸೇರಿಸಿದೆ. 4ಜಿ ಸೇವೆಗಳು ಆರಂಭಗೊಂಡ ಒಂದು ವರ್ಷದ ನಂತರ ಅದನ್ನು 5ಜಿ ಸೇವೆಗಳಿಗೆ ಮೇಲ್ದರ್ಜೆಗೆ ಏರಿಸಲಿದೆ.

ವೊಡಾಫೋನ್‌ಗೆ ಬಂಡವಾಳ: ಚರ್ಚೆ

ಭುವನೇಶ್ವರ (ಪಿಟಿಐ): ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್‌ ಐಡಿಯಾ ಕಂಪನಿಗೆ ಬಂಡವಾಳ ಒದಗಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಕಂಪನಿಗೆ ಹಲವು ಅಗತ್ಯಗಳಿದ್ದು, ಮುಖ್ಯವಾಗಿ ಬಂಡವಾಳದ ಅಗತ್ಯ ಇದೆ. ಎಷ್ಟು ಮೊತ್ತದ ಅಗತ್ಯ ಇದೆ, ಯಾರು ಹೂಡಿಕೆ ಮಾಡಲಿದ್ದಾರೆ ಎನ್ನುವ ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಕಂಪನಿಯು ₹ 2 ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲದಲ್ಲಿದ್ದು, ಕೇಂದ್ರಕ್ಕೆ ಪಾವತಿ ಮಾಡಬೇಕಿರುವ ₹ 16 ಸಾವಿರ ಕೋಟಿ ಬಡ್ಡಿಯ ಬದಲು ಕಂಪನಿಯ ಶೇ 33ರಷ್ಟು ಷೇರುಗಳನ್ನು ವರ್ಗಾಯಿಸಲು ನಿರ್ಧರಿಸಿದೆ. ಈ ವರ್ಗಾವಣೆಯ ಬಳಿಕ ಕಂಪನಿಯಲ್ಲಿ ಪ್ರವರ್ತಕರ ಷೇರುಪಾಲು ಶೇ 74.99ರಿಂದ ಶೇ 50ಕ್ಕೆ ಇಳಿಕೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT