ವಾಣಿಜ್ಯ ವಲಯದ ಸಂಕ್ಷಿಪ್ತ ಸುದ್ದಿಗಳು

7

ವಾಣಿಜ್ಯ ವಲಯದ ಸಂಕ್ಷಿಪ್ತ ಸುದ್ದಿಗಳು

Published:
Updated:

ವೊಡಾಫೋನ್‌ ಐಡಿಯಾ ವಿಲೀನ
ನವದೆಹಲಿ
: ವೊಡಾಫೋನ್‌ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್‌ ಗಳ ಭಾರತದಲ್ಲಿನ ವಹಿವಾಟಿನ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎರಡೂ ಸಂಸ್ಥೆಗಳು ಘೋಷಿಸಿವೆ.

 ಈ ವಿಲೀನದ ಒಟ್ಟಾರೆ ಮೊತ್ತವು ₹ 1.6 ಲಕ್ಷ ಕೋಟಿಗಳಷ್ಟಿದೆ. ದೇಶದ ಅತಿದೊಡ್ಡ ದೂರಸಂಪರ್ಕ ಸೇವಾ ಸಂಸ್ಥೆ ಇದಾಗಿದೆ. ವಿಲೀನಗೊಂಡ ಸಂಸ್ಥೆಯ ಹೆಸರನ್ನು ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಎಂದು ನಾಮಕರಣ ಮಾಡಲಾಗಿದೆ. ದೂರಸಂಪರ್ಕ ಮಾರುಕಟ್ಟೆಯಲ್ಲಿ ಭಾರ್ತಿ ಏರ್‌ಟೆಲ್‌ ಹಿಂದಿಕ್ಕಲಿರುವ ಹೊಸ ಸಂಸ್ಥೆಯ ಮಾರುಕಟ್ಟೆ ಪಾಲು ಶೇ 35ರಷ್ಟು ಇರಲಿದೆ.

ಚಂದಾ ಕೊಚ್ಚರ್‌ಗೆ ಬೆಂಬಲ
ನವದೆಹಲಿ
: ಐಸಿಐಸಿಐ ಸೆಕ್ಯುರಿಟೀಸ್‌ನ ಷೇರುದಾರರು ಕಂಪನಿಯ ಅಧ್ಯಕ್ಷೆಯಾಗಿ ಚಂದಾ ಕೊಚ್ಚರ್‌ ಅವರ ಮರು ನೇಮಕಾತಿ ಪರ ಮತ ಚಲಾಯಿಸಿದ್ದಾರೆ.

ಐಸಿಐಸಿಐ ಸೆಕ್ಯುರಿಟೀಸ್‌ನ ಪ್ರವರ್ತಕ ಸಂಸ್ಥೆಯಾಗಿರುವ ಐಸಿಐಸಿಐ ಬ್ಯಾಂಕ್‌ ಮತ್ತು ಇತರ ಪ್ರವರ್ತಕ ಸಮೂಹವು ಶೇ 100ರಷ್ಟು ಮತಗಳನ್ನು ಚಂದಾ ಪರವಾಗಿ ಚಲಾಯಿಸಿ ಅವರನ್ನು ಬೆಂಬಲಿಸಿವೆ.

ಉದ್ದಿಮೆ ಸಂಸ್ಥೆಗೆ ಸಾಲ ನೀಡಿಕೆಯಲ್ಲಿ ಅಕ್ರಮ ಎಸಗಿದ ಆರೋಪದ ತನಿಖೆ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಸದ್ಯಕ್ಕೆ ರಜೆ ಮೇಲೆ ತೆರಳಿದ್ದಾರೆ.
**
ಇಂದು ಅಂಚೆ ಪಾವತಿ ಬ್ಯಾಂಕ್‌ ಉದ್ಘಾಟನೆ 
ನವದೆಹಲಿ
: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 1ರಂದು (ಶನಿವಾರ) ಭಾರತ ಅಂಚೆ ಪಾವತಿ ಬ್ಯಾಂಕ್‌  (ಐಪಿಪಿಬಿ) ಉದ್ಘಾಟಿಸಲಿದ್ದಾರೆ.

ಇಲ್ಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ  ಉದ್ಘಾಟನಾ ಸಮಾರಂಭ ನಡೆಯಲಿದೆ. ಏಕಕಾಲದಲ್ಲಿ 650 ಶಾಖೆಗಳಿಗೂ ಚಾಲನೆ ಸಿಗಲಿದೆ. ದೇಶದಲ್ಲಿನ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳಿಗೆ ಈ ಡಿಸೆಂಬರ್‌ ಅಂತ್ಯದ ವೇಳೆಗೆ ‘ಐಪಿಪಿಬಿ’ಗೆ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !