ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಮೇಲೆ ಮುಂದಿನ ದಾಳಿ ನಡೆಯಲಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹993ರಷ್ಟು ಹೆಚ್ಚಾಗಿದೆ. ಇದು ಒಂದೇ ದಿನದಲ್ಲಿ ಆದ ಅತಿದೊಡ್ಡ ಏರಿಕೆ. ಇದೇ ಚುನಾವಣಾ ಬಿಲ್. ಟೀ ಸ್ಟಾಲ್ ಡಾಬಾ ಹೋಟೆಲ್ ಬೇಕರಿ ಸಿಹಿ ತಿನಿಸು ಅಂಗಡಿಗಳು ಹೀಗೆ ಪ್ರತಿ ಅಡುಗೆ ಮನೆಯ ಮೇಲಿನ ಹೊರೆ ಹೆಚ್ಚಾಗಿದೆ. ಇದು ನಿಮ್ಮ ಊಟದ ತಟ್ಟೆಯ ಮೇಲೂ ಪರಿಣಾಮ ಬೀರುತ್ತದೆ.
-ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ
ಸಿಲಿಂಡರ್ ಬೆಲೆಯಷ್ಟೇ ದುಬಾರಿ ಆಗುವುದಿಲ್ಲ; ರೊಟ್ಟಿ–ಊಟದ ಬೆಲೆಯೂ ಹೆಚ್ಚಾಗುತ್ತದೆ. ಅದರ ನೋವು ಸ್ವತಃ ಹಣ ನೀಡಿ ಖರೀದಿಸಿ ತಿನ್ನುವವರಿಗೆ ಮಾತ್ರ ತಿಳಿಯುತ್ತದೆ. ಬೇರೆಯವರ ಮನೆಯಲ್ಲಿ ತಿನ್ನುವವನಿಗಲ್ಲ ಅಥವಾ ಬೇರೆಯವರ ತಟ್ಟೆಯಿಂದ ಕಸಿದು ತಿನ್ನುವವನಿಗಲ್ಲ.
-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಅಧ್ಯಕ್ಷ
ಸಮಯ ವ್ಯರ್ಥ ಮಾಡದೆ ದರ ಏರಿಕೆ ಸಾಮಾನ್ಯ ಜನರ ಕಷ್ಟಗಳ ಬಗ್ಗೆ ಆಡಳಿತ ಪಕ್ಷಕ್ಕಿರುವ ಕಾಳಜಿ ಚುನಾವಣಾ ಗಿಮಿಕ್‌ಗಳಿಗೆ ಸೀಮಿತವಾಗಿದೆ. ಚುನಾವಣೆ ಮುಗಿದ ತಕ್ಷಣ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಿಸಲು ಮೋದಿ ಸರ್ಕಾರ ಸಮಯ ವ್ಯರ್ಥ ಮಾಡಲಿಲ್ಲ.
-ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಜಗತ್ತಿನ ಇತರ ದೇಶಗಳಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿ ನೋಡಿ. ನಾವು ಇಷ್ಟರ ಮಟ್ಟಿಗೆ ಮಾತ್ರ ತಡೆಯಬಹುದು
-ಸುರೇಶ್ ಗೋಪಿ, ಪೆಟ್ರೋಲಿಯಂ ಸಚಿವಾಲಯದ ರಾಜ್ಯ ಖಾತೆ ಸಚಿವ