ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕವಾಗಿ ಇಂಧನ ಬೆಲೆಗಳು ಏರುತ್ತಿರುವಂತೆಯೇ ದೇಶದಲ್ಲೂ ಶುಕ್ರವಾರ ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ₹993 ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಬೆಲೆ ₹3,152ಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ ₹3071.50ಗೆ ತಲುಪಿದೆ.
.ವಾಣಿಜ್ಯ ಸಿಲಿಂಡರ್ ಮತ್ತೆ ದುಬಾರಿ: ₹993 ಏರಿಕೆ, ಹೋಟೆಲ್ಗಳಿಗೆ ಭಾರಿ ಹೊರೆ.
ಬೆಲೆ ಏರಿಕೆಗಿದೆ ಇನ್ನೊಂದು ಕಾರಣ

ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ, ಒಪೆಕ್ ಮತ್ತು ಒಪೆಕ್+ ಒಕ್ಕೂಟದಿಂದ ಯುಎಇ ಹೊರಬರಲು ನಿರ್ಧರಿಸಿರುವುದೂ ಪ್ರಮುಖ ಕಾರಣವಾಗಿದೆ.

ಅತಿದೊಡ್ಡ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಯುಎಇ, ಒಪೆಕ್ನಿಂದ ಹೊರಬಂದರೆ ಭವಿಷ್ಯದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈಗಾಗಲೇ ಸೃಷ್ಟಿಯಾಗಿರುವ ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಯು ಇದರಿಂದಾಗಿ ಮತ್ತಷ್ಟು ಬಿಗಡಾಯಿಸಲಿದೆ. ಪರಿಣಾಮ ತೈಲ ಬೆಲೆಗಳು ಹೆಚ್ಚಾಗುತ್ತಲೇ ಇರುತ್ತವೆ.

ವಾಣಿಜ್ಯ ಸಿಲಿಂಡರ್ ಬೆಲೆ ಮಾತ್ರ ಏರಿಕೆ ಯಾಕೆ?

ಜಾಗತಿಕ ಇಂಧನ ಬೆಲೆಗಳು ಏರುತ್ತಿದ್ದರೂ, ಸರ್ಕಾರವು ಚಿಲ್ಲರೆ ಗ್ರಾಹಕರನ್ನು ರಕ್ಷಿಸಲು ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಹೀಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಗೃಹಬಳಕೆಯ (14.2 ಕೆ.ಜಿ) ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ತೈಲ ಮಾರುಕಟ್ಟೆ ಕಂಪನಿಗಳು ಸಂಪೂರ್ಣ ವೆಚ್ಚದ ಹೊರೆಯನ್ನು ಭರಿಸಲು ಸಾಧ್ಯವಿಲ್ಲ. ಇದನ್ನು ಸಮತೋಲನಗೊಳಿಸಲು, ಬೆಲೆ ಪರಿಷ್ಕರಣೆಗಳನ್ನು ವಾಣಿಜ್ಯ ಎಲ್ಪಿಜಿಯಂತಹ ಸಣ್ಣ ವಿಭಾಗಗಳಿಗೆ ವರ್ಗಾಯಿಸಲಾಗುತ್ತಿದೆ.

ಹೀಗಾಗಿಯೇ ಹೋಟೆಲ್, ರೆಸ್ಟೋರೆಂಟ್ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಹೊರತು ಗೃಹ ಬಳಕೆಯ ಸಿಲಿಂಡರ್ ಬಳಕೆಯ ಮೇಲಲ್ಲ.

ಉದ್ಯಮಕ್ಕೆ ಹೊಡೆತ

ವಾಣಿಜ್ಯ ಎಲ್ಪಿಜಿ ಬೆಲೆ ಏರಿಕೆಯು ಆಹಾರ ಪೂರೈಕೆ, ಆಸ್ಪತ್ರೆ ಮತ್ತು ಸಣ್ಣ ಪ್ರಮಾಣದ ಉತ್ಪಾದನೆ ಮೇಲೆ ಪರಿಣಾಮ ನೇರವಾಗಿ ಬೀರುತ್ತದೆ.

ಹೀಗಾಗಿ ಹೋಟೆಲ್, ರೆಸ್ಟೋರೆಂಟ್ಗಳಲ್ಲು ಆಹಾರದ ಬೆಲೆ ಹೆಚ್ಚಳವಾಗಲಿದೆ.

ಗೃಹಬಳಕೆ ಸಿಲಿಂಡರ್ ದರ ಏರಿಕೆಯಾಗಲಿದೆಯೇ?

ಸದ್ಯದ ಮಟ್ಟಿಗೆ, ಜನರನ್ನು ಬೆಲೆ ಏರಿಕೆಯ ಹೊರೆಯಿಂದ ರಕ್ಷಿಸಲು ಸರ್ಕಾರ ಗೃಹ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿಲ್ಲ.

ಆದರೂ, ಜಾಗತಿಕವಾಗಿ ತೈಲ ಪೂರೈಕೆಯ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಬೆಲೆ ಏರಿಕೆ ಮಾಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆಯನ್ನೂ ನಿರೀಕ್ಷಿಸಬಹುದಾಗಿದೆ.

ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ

ಮುಂಬೈ: ₹3,024

ಬೆಂಗಳೂರು: ₹3,152

ನವದೆಹಲಿ: ₹3,071.50

ಅಹಮದಾಬಾದ್: ₹3,091

ಕೋಲ್ಕತ್ತ:₹3,202

ಚೆನ್ನೈ:₹3,237

ಪುಣೆ:₹3,084

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.