ನವದೆಹಲಿ: 19 ಕೆ.ಜಿ ತೂಕದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವು ಸೋಮವಾರ ಪ್ರತಿ ಸಿಲಿಂಡರ್‌ಗೆ ₹ 171.5ರಷ್ಟು ಇಳಿಕೆಯಾಗಿದೆ. ವಿಮಾನ ಇಂಧನ (ಎಟಿಎಫ್) ದರವನ್ನು ಶೇಕಡ 2.45ರಷ್ಟು ಕಡಿಮೆ ಮಾಡಲಾಗಿದೆ.
ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವು ಈಗ ₹ 1,856.5 ಆಗಿದೆ. ಬೆಂಗಳೂರಿನಲ್ಲಿ ಇದರ ದರ ₹ 1,936 ಆಗಿದೆ. ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರವು ಸತತ ಎರಡು ತಿಂಗಳುಗಳಿಂದ ಇಳಿಕೆಯಾಗಿದೆ.
ಏಪ್ರಿಲ್ 1ರಂದು ಇದರ ದರವನ್ನು ಸಿಲಿಂಡರ್‌ಗೆ ₹ 91.5ರಷ್ಟು ಕಡಿಮೆ ಮಾಡಲಾಗಿತ್ತು. ಇದಕ್ಕೂ ಮೊದಲು, ಮಾರ್ಚ್ 1ರಂದು ದರವನ್ನು ₹ 350.5ರಷ್ಟು ಹೆಚ್ಚಿಸಲಾಗಿತ್ತು. ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸೋಮವಾರ ಬದಲಾವಣೆ ಆಗಿಲ್ಲ.
ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡುವುದಾಗಿ ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ (ಒಪೆಕ್+) ಪ್ರಕಟಣೆ ಹೊರಡಿಸಿದ ನಂತರದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದ್ದ ಕಚ್ಚಾ ತೈಲದ ಬೆಲೆಯು ಆರ್ಥಿಕ ಹಿಂಜರಿತ ಭೀತಿಯ ಕಾರಣದಿಂದಾಗಿ ಮತ್ತೆ ಕುಸಿದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 79.62 ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿದೆ. ಏಪ್ರಿಲ್ 2ರಂದು ಇದರ ಬೆಲೆಯು 88 ಡಾಲರ್ ಆಗಿತ್ತು.
undefined undefined
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.