ಶುಕ್ರವಾರ, ಡಿಸೆಂಬರ್ 13, 2019
27 °C

ಎಲ್‌ಐಸಿ: ಕ್ರೆಡಿಟ್‌ ಕಾರ್ಡ್‌ ಸೇವಾ ಶುಲ್ಕ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಪಾಲಿಸಿದಾರರು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುವುದಕ್ಕೆ ವಿಧಿಸುತ್ತಿದ್ದ ಸೇವಾ ಶುಲ್ಕ ರದ್ದುಪಡಿಸಿದೆ.

 ಕ್ರೆಡಿಟ್‌ ಕಾರ್ಡ್‌ ಮೂಲಕ ಮುಂಗಡ ಕಂತು, ಕಂತು ನವೀಕರಣ, ಸಾಲ ಮರುಪಾವತಿ, ಸಾಲದ ಬಡ್ಡಿ ಪಾವತಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ. ಇನ್ನು ಮುಂದೆ ಎಲ್ಲ ಬಗೆಯ ಡಿಜಿಟಲ್‌ ವಹಿವಾಟು ಶುಲ್ಕ ಮುಕ್ತವಾಗಿರಲಿವೆ ಎಂದು ನಿಗಮವು ತಿಳಿಸಿದೆ.

ನಿಗಮದ ಗ್ರಾಹಕರು MYLIC ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್‌ ಸೇವಾ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು