ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿತದ ಹಾದಿಯಲ್ಲಿ ಕೊಬ್ಬರಿ ಬೆಲೆ

Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ತುಮಕೂರು: ಏಷ್ಯಾದ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿರುವ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿಯುತ್ತಲೇ ಇದೆ.

ಮಾರುಕಟ್ಟೆಯಲ್ಲಿ ಬುಧವಾರ ಮತ್ತು ಶನಿವಾರ ಕೊಬ್ಬರಿ ಹರಾಜು ನಡೆಯುತ್ತದೆ. ಮೇ ತಿಂಗಳಲ್ಲಿ ಕ್ವಿಂಟಲ್ ಕೊಬ್ಬರಿ ಬೆಲೆ ₹ 16,500 ಇತ್ತು. ಈ ಬೆಲೆ ಹಂತ ಹಂತವಾಗಿ ಇಳಿಯುತ್ತಲೇ ಇದೆ. ಪ್ರತಿ ಹರಾಜಿನಲ್ಲಿ ₹ 200ರಿಂದ 300ರಂತೆ ಬೆಲೆ ಕುಸಿಯುತ್ತಿದೆ.

ಈ ತಿಂಗಳ 9ರಂದು ವರ್ತಕರು ಕ್ವಿಂಟಲ್ ಕೊಬ್ಬರಿಯನ್ನು ₹ 12,533ಕ್ಕೆ ಖರೀದಿಸಿದ್ದರು. 20ರಂದು (ಬುಧವಾರ) ₹ 11,666ಕ್ಕೆ ಖರೀದಿಸಿದ್ದಾರೆ. ಹೀಗೆ ಕೇವಲ 11 ದಿನಗಳಲ್ಲಿ ಕೊಬ್ಬರಿ ಬೆಲೆ ₹ 1 ಸಾವಿರ ಕುಸಿತ ಕಂಡಿದೆ.

ದಿಢೀರ್ ಬೆಲೆ ಕುಸಿತದ ಪರಿಣಾಮಗಳು ವರ್ತಕರು ಮತ್ತು ರೈತರ ಮೇಲೆ ದೊಡ್ಡ ಮಟ್ಟದಲ್ಲಿಯೇ ಆಗುತ್ತವೆ. ಆದರೆ, ಈ ಸಣ್ಣ ಮಟ್ಟದ ಕುಸಿತದಿಂದ ರೈತರಿಗೆ ಮಾತ್ರ ಹೊಡೆತ ಬೀಳುತ್ತಿದೆ ಎಂದು ಕೊಬ್ಬರಿ ವ್ಯಾಪಾರ ವಹಿವಾಟಿನ ಆಳ ಬಲ್ಲವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT