ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಸಾವಿರಕ್ಕೆ ಕುಸಿದ ಕೊಬ್ಬರಿ ಬೆಲೆ: ಬೆಲೆ ಇಳಿಕೆಗೂ ಕೋವಿಡ್‌–19ಗೂ ಸಂಬಂಧವಿಲ್ಲ

Last Updated 5 ಮಾರ್ಚ್ 2020, 17:54 IST
ಅಕ್ಷರ ಗಾತ್ರ

ತಿಪಟೂರು: ಏಷ್ಯಾದಲ್ಲೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಪ್ರಸ್ತುತ ಕ್ವಿಂಟಲ್ ಬೆಲೆ ₹ 10 ಸಾವಿರದ ಆಸುಪಾಸಿನಲ್ಲಿದ್ದು, ಕಳೆದ ವರ್ಷ ಕ್ವಿಂಟಲ್ ಒಂದಕ್ಕೆ ₹19 ಸಾವಿರದಿಂದ ₹20 ಸಾವಿರಕ್ಕೆ ಮಾರಾಟವಾಗಿತ್ತು. ಹಿಂದಿನ ವರ್ಷ 42 ಸಾವಿರ ಟನ್ ವಹಿವಾಟು ನಡೆದಿತ್ತು.

ಬೇಸಿಗೆ ಪ್ರಾರಂಭದಲ್ಲಿಯೇ ಕೊಬ್ಬರಿ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕುಸಿಯುವ ಸಾಧ್ಯತೆಗಳು ಕಂಡು ಬಂದಿವೆ.

ತಿಪಟೂರಿನಿಂದ ಸರಕು ಹೈದರಾಬಾದ್, ಉತ್ತರ ಪ್ರದೇಶ, ದೆಹಲಿ, ಮುಂಬೈ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳ ಮಾರುಕಟ್ಟೆಗೆ ಹೋಗುತ್ತದೆ. ಈ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಕೊಬ್ಬರಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಬಿಸಿಲು ಆರಂಭವಾದರೆ ಬಳಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಪೂರೈಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿತವಾಗುತ್ತಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

**

ತಿಪಟೂರಿನಿಂದ ಚೀನಾಕ್ಕೆ ಕೊಬ್ಬರಿ ಸರಬರಾಜು ಆಗಿಲ್ಲ. ಹಾಂಗ್‌ಕಾಂಗ್, ನೇಪಾಳಕ್ಕೆ ಮಾತ್ರವೇ ರಫ್ತು ಮಾಡಲಾಗುತ್ತಿದೆ. ಬೆಲೆ ಇಳಿಕೆಗೂ ಕೋವಿಡ್‌–19ಕ್ಕೂ ಸಂಬಂಧವಿಲ್ಲ.
-ನ್ಯಾಮಗೌಡ, ಕಾರ್ಯದರ್ಶಿ, ಎಪಿಎಂಸಿ ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT