ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಿಂದ ಇಳಿಮುಖ l ಹಳಿ ತಪ್ಪಿದ ಮೂಲಸೌಕರ್ಯ

ಜುಲೈನಲ್ಲಿ ಶೇ 5.2ರಷ್ಟು ಭಾರಿ ಕುಸಿತ
Last Updated 3 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಪ್ರಗತಿಯು ಜುಲೈನಲ್ಲಿ ಶೇ 5.2ರಷ್ಟು ಭಾರಿ ಕುಸಿತ ಕಂಡಿದೆ. ದೇಶವು ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಎನ್ನುವುದನ್ನು ಈ ಅಂಕಿ–ಅಂಶ ಸೂಚಿಸುತ್ತಿದೆ.

2018ರ ಜುಲೈನಲ್ಲಿ ಈ ಕೈಗಾರಿಕೆಗಳ ಪ್ರಗತಿ ಶೇ 7.3ರಷ್ಟಿತ್ತು. 2019ರಜುಲೈನಲ್ಲಿ ಶೇ 2.1ಕ್ಕೆ ಇಳಿಕೆಯಾಗಿದೆ.

ಕಲ್ಲಿದ್ದಲು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ವಲಯದ ತಯಾರಿಕೆಯಲ್ಲಿ ಇಳಿಕೆಯಾಗಿದೆ. ಇದು ಮೂಲಸೌಕರ್ಯ ವಲಯದ ಒಟ್ಟಾರೆ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

8 ಕೈಗಾರಿಕೆಗಳು: ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ಇವು ಪ್ರಮುಖ 8 ಕೈಗಾರಿಕೆಗಳಾಗಿವೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ (ಐಐಪಿ) ಈ 8 ಕೈಗಾರಿಕೆಗಳು ಶೇ 40.27ರಷ್ಟು ಕೊಡುಗೆ ನೀಡುತ್ತಿವೆ.

ವಲಯದ ಏಪ್ರಿಲ್‌–ಜುಲೈ ಅವಧಿಯಲ್ಲಿನ ಬೆಳವಣಿಗೆಯು ಶೇ 5.9ರಿಂದ ಶೇ 3ಕ್ಕೆ ಬಹುತೇಕ ಅರ್ಧದಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT