ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪರಿಣಾಮ: ಮಧ್ಯಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ₹1 ಹೆಚ್ಚಳ

Last Updated 13 ಜೂನ್ 2020, 6:38 IST
ಅಕ್ಷರ ಗಾತ್ರ

ಭೋಪಾಲ್: ಕೊರೊನಾ ವೈರಸ್ ಪರಿಣಾಮವಾಗಿ ಕಡಿಮೆಯಾಗಿರುವ ಆದಾಯವನ್ನು ಸರಿದೂಗಿಸಲು ಮಧ್ಯಪ್ರದೇಶ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಶನಿವಾರ ₹1 ಹೆಚ್ಚಳ ಮಾಡಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಅಧಿಸೂಚನೆ ಪ್ರಕಾರ, ಹೊಸ ತೆರಿಗೆಯು ಇಂದಿನಿಂದಲೇ (ಜೂನ್ 13) ಅನ್ವಯವಾಗಲಿದೆ. ಸದ್ಯ ಮಧ್ಯಪ್ರದೇಶದಲ್ಲಿ ಪ್ರತಿ ಪೆಟ್ರೋಲ್, ಡೀಸೆಲ್‌ಗೆ ಕ್ರಮವಾಗಿ ₹3.50 ಮತ್ತು ₹2 ತೆರಿಗೆ ಪಾವತಿಸಲಾಗುತ್ತಿದೆ. ಇದೀಗ ಹೆಚ್ಚಳದ ಬಳಿಕ ಉಭಯ ಇಂಧನಗಳ ಮೇಲಿನ ತೆರಿಗೆ ಕ್ರಮವಾಗಿ ₹4.30 ಮತ್ತು ₹3 ಆಗಲಿದೆ.

ಕೇಂದ್ರ ಸರ್ಕಾರವೂ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಳೆದ ತಿಂಗಳು ಹೆಚ್ಚಿಸಿತ್ತು. ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ಸತತವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT