ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಕಾರ್ಪೊರೇಟ್‌ ವರಮಾನ ಶೇ 25 ಇಳಿಕೆ

ಸಹಜ ಸ್ಥಿತಿಗೆ ಮರಳಲು ಬೇಕು ವರ್ಷ
Last Updated 21 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಪೊರೇಟ್‌ ವರಮಾನ ಶೇ 25ರಷ್ಟು ಇಳಿಕೆ ಕಂಡಿದ್ದು, ಸಹಜ ಸ್ಥಿತಿಗೆ ಮರಳಲು ಕನಿಷ್ಠ ಒಂದು ವರ್ಷ ಬೇಕಾಗಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆನ್‌ಲೈನ್‌ ಮೂಲಕ ಹೂಡಿಕೆ ನೆರವು ನೀಡುವ ಸ್ಕ್ರಿಪ್‌ಬಾಕ್ಸ್‌ ಕಂಪನಿ ನಡೆಸಿರುವ ‘ಕೋವಿಡ್‌–19 ಆ್ಯಂಡ್‌ ಯುವರ್‌ ಹೆಲ್ತ್‌’ ಸಮೀಕ್ಷೆಯಲ್ಲಿ ಲಾಕ್‌ಡೌನ್‌ನಿಂದ ಕಂಪನಿಗಳ ವರಮಾನ ಮತ್ತು ಉದ್ಯೋಗ ನಷ್ಟದ ಬಗ್ಗೆ ಮಾಹಿತಿ ನೀಡಿದೆ.

‘ಶೇ 25ರಷ್ಟು ವರಮಾನ ನಷ್ಟವಾಗಿದೆ. 2021ರ ಒಳಗೆ ವಹಿವಾಟು ಸಹಜ ಸ್ಥಿತಿಗೆ ಮರಳಲಿದೆ’ ಎಂದು ಮುಂಚೂಣಿಯಲ್ಲಿ ಇರುವ ಉದ್ಯಮಿಗಳು, ಕಂಪನಿಗಳ ಮಾಲೀಕರು ಮತ್ತು ಸಂಸ್ಥಾಪಕರಲ್ಲಿ ಶೇ 67ರಷ್ಟು ಮಂದಿ ಹೇಳಿಕೊಂಡಿದ್ದಾರೆ.

ಮೇ 1–15ರ ಅವಧಿಯಲ್ಲಿಆನ್‌ಲೈನ್‌ ಸಮೀಕ್ಷೆ ನಡೆಸಿದ್ದು,1,200 ಉದ್ಯಮಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ನಷ್ಟವಾಗಿದೆ ಎಂದೂ ತಿಳಿಸಿದೆ.

ಶೇ 25ಕ್ಕಿಂತಲೂ ಕಡಿಮೆ ಉದ್ಯೋಗ ನಷ್ಟವಾಗಿದೆ ಎಂದು ಶೇ 99ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಶೇ 10ರಷ್ಟು ಮಂದಿ ಶೇ 25ರಷ್ಟು ಉದ್ಯೋಗ ನಷ್ಟವಾಗಿದೆ ಎಂದು ಹೇಳಿದ್ದಾರೆ.

54%

ದೊಡ್ಡ ಕಂಪನಿಗಳು

32%

ಎಸ್‌ಎಂಇ

14%

ನವೋದ್ಯಮಗಳು

67%

ಶೇ 25ರಷ್ಟು ವರಮಾನ ನಷ್ಟವಾಗಿದೆ ಎಂದು ಹೇಳಿರುವವರು

25%

ವಹಿವಾಟು ಸಹಜ ಸ್ಥಿತಿಗೆ ಮರಳಲು ಒಂದು ವರ್ಷ ಬೇಕು ಎಂದಿರುವವರು

22%

ವಹಿವಾಟು ಸಹಜ ಸ್ಥಿತಿಗೆ ಮರಳಲು ಒಂದಕ್ಕಿಂತಲೂ ಹೆಚ್ಚಿನ ವರ್ಷ ಬೇಕಾಗಲಿದೆ ಎಂದಿರುವವರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT