ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮೂರನೇ ಅಲೆಯಿಂದ ಜಿಡಿಪಿ ಬೆಳವಣಿಗೆ ಶೇ 7ಕ್ಕೆ ಇಳಿಕೆ: ಅಭಿಜಿತ್ ಬ್ಯಾನರ್ಜಿ

Last Updated 6 ಆಗಸ್ಟ್ 2021, 1:23 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋವಿಡ್–19 ಸಾಂಕ್ರಾಮಿಕದ ಮೂರನೇ ಅಲೆಯು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ಮೇಲೆ ತೀವ್ರ ಅಡ್ಡಪರಿಣಾಮ ಉಂಟುಮಾಡಲಿದೆ ಎಂದು ನೊಬೆಲ್ ಪುಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ 9.5ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ ಅಂದಾಜಿಸಿತ್ತು. ಆದರೆ ಕೋವಿಡ್ ಮೂರನೇ ಅಲೆ ಹೊಡೆತಕ್ಕೆ ಸಿಲುಕಿದರೆ ಇದು ಕೇವಲ ಶೇ 7ರಷ್ಟಿರಲಿದೆ ಎಂದು ಬ್ಯಾನರ್ಜಿ ಅಂದಾಜಿಸಿದ್ದಾರೆ.

‘ಕೋವಿಡ್ ಪರಿಸ್ಥಿತಿಯಿಂದಾಗಿ ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದೆ. ಕೋವಿಡ್‌ನ ಎರಡನೆಯ ಅಲೆ ಅಪ್ಪಳಿಸುವುದಕ್ಕೂ ಮೊದಲು ಐಎಂಎಫ್‌, ಭಾರತದ ಜಿಡಿಪಿ ಈ ವರ್ಷದಲ್ಲಿ ಶೇ 12.5ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಇದೀಗ ಶೇ 9.5ರಷ್ಟು ಇರಬಹುದು ಎಂದು ಹೇಳುತ್ತಿದೆ. ಆದರೆ, ಮತ್ತೊಂದು ಅಲೆ ಉಂಟಾದರೆ ಜಿಡಿಪಿ ಶೇ 7ರಷ್ಟು ಮಾತ್ರವೇ ಬೆಳವಣಿಗೆ ಸಾಧಿಸಬಹುದು’ ಎಂದು ಅವರು ಹೇಳಿದ್ದಾರೆ.

ಐಎಂಎಫ್ ಕಳೆದ ತಿಂಗಳು ಭಾರತದ ಜಿಡಿಪಿ ಬಗ್ಗೆ ಮುನ್ಸೂಚನೆ ನೀಡಿತ್ತು. ಜಾಗತಿಕ ಮಟ್ಟದ ಹಲವು ಸಂಸ್ಥೆಗಳೂ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ತಗ್ಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT