ಭಾನುವಾರ, ಡಿಸೆಂಬರ್ 6, 2020
22 °C

ಎಂಎಸ್‌ಎಂಇ ಬಾಕಿ: ₹ 13,400 ಕೋಟಿ ಪಾವತಿಸಿದ ಕೇಂದ್ರೋದ್ಯಮಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳು (ಸಿಪಿಎಸ್‌) ಐದು ತಿಂಗಳಿನಲ್ಲಿ ₹ 13,400 ಕೋಟಿ ಬಾಕಿ ಮೊತ್ತವನ್ನು ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಪಾವತಿಸಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಎಂಎಸ್‌ಎಂಇ ಸಚಿವಾಲಯವು 2,800ಕ್ಕೂ ಅಧಿಕ ಕಂಪನಿಗಳ ಆಡಳಿತ ಮಂಡಳಿಗಳಿಗೆ ಬಾಕಿ ಮೊತ್ತ ಪಾವತಿಸುವಂತೆ ಈಗ ಪತ್ರ ಬರೆದಿದೆ.

ಬಾಕಿ ಮೊತ್ತ ಪಾವತಿಸುವುದರಿಂದ ವಲಯದ ಕಾರ್ಯಾಚರಣೆ ಮತ್ತು ಆ ಉದ್ದಿಮೆಗಳ ಕೆಲಸಗಾರರ ಜೀವನ ನಿರ್ವಹಣೆಗೆ ಅನುಕೂಲ ಆಗಲಿದೆ. ಕೆಲವು ಉದ್ದಿಮೆಗಳಿಗೆ ಹಬ್ಬದ ಸಂದರ್ಭದಲ್ಲಿನ ವಹಿವಾಟು ಬಹಳ ಮುಖ್ಯ. ಏಕೆಂದರೆ ಈ ಅವಧಿಯಲ್ಲಿ ನಡೆಯುವ ವಹಿವಾಟು ಆಧರಿಸಿ ಅವು ವರ್ಷವಿಡೀ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಂಎಸ್‌ಎಂಇಗಳಿಗೆ ನೀಡಬೇಕಿರುವ ಬಾಕಿಯನ್ನು ಆದ್ಯತೆಯ ಮೇರೆಗೆ ಪಾವತಿಸುವಂತೆ ಎಂಎಸ್‌ಎಂಇ ಸಚಿವಾಲಯವು ಕಾರ್ಪೊರೇಟ್ ಕಂಪನಿಗಳಿಗೆ ಕಳೆದ ತಿಂಗಳು ಕೂಡ ಸೂಚನೆ ನೀಡಿತ್ತು. ಈ ಸಂಬಂಧ ದೇಶದ ಮುಂಚೂಣಿ 500 ಕಂಪನಿಗಳ ಮಾಲೀಕರು ಅಥವಾ ಕಂಪನಿಗಳ ಉನ್ನತಾಧಿಕಾರಿಗಳಿಗೆ ಸಚಿವಾಲಯವು ಇ–ಮೇಲ್‌ ಕಳುಹಿಸಿರುವುದಾಗಿಯೂ ತಿಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು