ಭಾನುವಾರ, ಜನವರಿ 26, 2020
28 °C
ದೇಶಿ ಉತ್ಪಾದನೆ ಇಳಿಕೆ l ಆಮದು ಪ್ರಮಾಣ ಗಣನೀಯ ಹೆಚ್ಚಳ

ತೈಲ ಸ್ವಾವಲಂಬನೆಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಚ್ಚಾ ತೈಲ ಆಮದಿನ ಮೇಲೆ ಭಾರತವು ಅತಿ ಹೆಚ್ಚು ವೆಚ್ಚ ಮಾಡುತ್ತಿದೆ. ಹೀಗಾಗಿ ಆಮದು ಅವಲಂಬನೆ ಕಡಿಮೆ ಮಾಡಿಕೊಳ್ಳುವ ಯೋಜನೆಯನ್ನು ಹೊಂದಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿದರೆ ಇದು ಅತ್ಯಂತ ಸವಾಲಿನ ಕೆಲಸವೇ ಸರಿ.

ದೇಶದ ತೈಲ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದರೆ, ಉತ್ಪಾದನೆ ಇಳಿಮುಖವಾಗಿದೆ. ಇದರಿಂದಾಗಿ ಕಚ್ಚಾ ತೈಲಕ್ಕಾಗಿ ಬೇರೆ ದೇಶಗಳ ಮೇಲಿನ ಆಮದು ಅವಲಂಬನೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್‌ನಲ್ಲಿ ಆಮದು ವೆಚ್ಚ ₹ 59,798 ಕೋಟಿ ಇತ್ತು. ಇದು ನವೆಂಬರ್‌ನಲ್ಲಿ ₹ 61,315 ಕೋಟಿಗೆ ಏರಿಕೆಯಾಗಿದೆ.

2017–18ರಲ್ಲಿ ಶೇ 82.9ರಷ್ಟಿದ್ದ ತೈಲ ಆಮದು ಅವಲಂಬನೆ 2018–19ರಲ್ಲಿ ಶೇ 83.7ಕ್ಕೆ ಏರಿಕೆಯಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ತೈಲೋತ್ಪನ್ನಗಳ ಯೋಜನೆ ಮತ್ತು ವಿಶ್ಲೇಷಣಾ ಘಟಕ (ಪಿಪಿಸಿಎ) ಮಾಹಿತಿ ನೀಡಿದೆ. ದೇಶಿ ಕಂಪನಿಗಳ ತೈಲ ಉತ್ಪಾದನೆಯೂ ಇಳಿಕೆಯಾಗಿದೆ. 2017–18ರಲ್ಲಿ 3.40 ಕೋಟಿ ಟನ್‌ಗಳಷ್ಟಿದ್ದ ಉತ್ಪಾದನೆಯು 2018–19ರಲ್ಲಿ 3.25 ಕೋಟಿ ಟನ್‌ಗಳಿಗೆ ಇಳಿಕೆಯಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು