ಲಂಡನ್/ ನವದೆಹಲಿ (ಪಿಟಿಐ/ ಎಎಫ್ಪಿ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಗುರುವಾರ ನಾಲ್ಕು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತು. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ಮತ್ತೆ ತೀವ್ರಗೊಳ್ಳಬಹುದು ಎಂಬ ಆಂತಕದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯು ಜಿಗಿದಿದೆ ಎಂದು ತಜ್ಞರು ಹೇಳಿದ್ದಾರೆ.

ಬ್ರೆಂಟ್ ಕಚ್ಚಾ ತೈಲದ ಬೆಲೆಯು ಗುರುವಾರದ ವಹಿವಾಟಿನಲ್ಲಿ ಬ್ಯಾರಲ್ ಒಂದಕ್ಕೆ 126 ಡಾಲರ್ ಮಟ್ಟವನ್ನು ತಲುಪಿತ್ತು. ನಂತರ ಅದು ತುಸು ಕಡಿಮೆ ಆಯಿತು. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಈ ಮಟ್ಟವನ್ನು ಕಡೆಯ ಬಾರಿ ತಲುಪಿದ್ದು 2022ರ ಮಾರ್ಚ್ 8ರಂದು.

ಇರಾನ್ನ ಬಂದರುಗಳ ಮೇಲಿನ ದಿಗ್ಬಂಧನವು ತಿಂಗಳುಗಳವರೆಗೆ ಮುಂದುವರಿಯಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿರುವುದು ವಿವಿಧೆಡೆ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್ ಗುರಿಯಾಗಿಸಿ ಹೊಸದಾಗಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಟ್ರಂಪ್ ಅವರಿಗೆ ಮಾಹಿತಿ ಒದಗಿಸಲಾಗುತ್ತದೆ ಎಂಬ ವರದಿಗಳೂ ಇವೆ.

‘ಶಾಂತಿ ಸ್ಥಾಪನೆ ಉದ್ದೇಶದ ಮಾತುಕತೆಗಳು ನಡೆಯುವ ಯಾವುದೇ ಸೂಚನೆ ಕಾಣುತ್ತಿಲ್ಲ, ಸಂಘರ್ಷವು ತೀವ್ರ ಆಗಬಹುದು ಎಂಬ ಭೀತಿ ಹೆಚ್ಚಾಗಿದೆ. ಹೀಗಾಗಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಕಂಡಿದೆ’ ಎಂದು ಡಾಯಿಚ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಜಿಮ್ ರೀಡ್ ಹೇಳಿದ್ದಾರೆ.

ಯುಎಇ ದೇಶವು ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ ‘ಒಪೆಕ್’ನಿಂದ ಹೊರಬರುವ ತೀರ್ಮಾನ ತೆಗೆದುಕೊಂಡಿರುವುದು ಕೂಡ ತೈಲ ಬೆಲೆ ಏರಿಕೆಗೆ ಒಂದು ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-51-1871153547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.