ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಡಾಲರ್‌ಗೆ ಕಚ್ಚಾ ತೈಲ ಬೆಲೆ?

Last Updated 12 ಜನವರಿ 2022, 16:10 IST
ಅಕ್ಷರ ಗಾತ್ರ

ಲಂಡನ್: 2021ರಲ್ಲಿ ಶೇಕಡ 50ರಷ್ಟು ಹೆಚ್ಚಳ ಕಂಡ ಕಚ್ಚಾ ತೈಲದ ಬೆಲೆಯು ಈ ವರ್ಷದಲ್ಲಿಯೂ ಇನ್ನಷ್ಟು ಏರಿಕೆ ಕಾಣಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಾಗದಿರುವುದು ಮತ್ತು ಈ ವಲಯದಲ್ಲಿ ಹೂಡಿಕೆ ಸೀಮಿತ ಆಗಿರುವ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತಲೂ ಜಾಸ್ತಿ ಆಗಬಹುದು ಎಂದು ಅವರು ಅಂದಾಜಿಸಿದ್ದಾರೆ.

ಓಮೈಕ್ರಾನ್‌ ಕಾರಣದಿಂದಾಗಿ ಕೋವಿಡ್‌ ಪ್ರಕರಣಗಳು ಜಗತ್ತಿನ ಹಲವೆಡೆ ಹೆಚ್ಚಾಗುತ್ತಿದ್ದರೂ, ಹಲವು ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರುತ್ತಿಲ್ಲ. ಇದು ತೈಲ ಬೆಲೆ ಹೆಚ್ಚಳಕ್ಕೆ ನೆರವಾಗಬಹುದು ಎನ್ನಲಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬುಧವಾರ ಪ್ರತಿ ಬ್ಯಾರೆಲ್‌ಗೆ 84 ಡಾಲರ್‌ಗೆ ತಲುಪಿದೆ. ಇದು ಎರಡು ತಿಂಗಳ ಗರಿಷ್ಠ ಮಟ್ಟ.

ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರ ದೇಶಗಳ ಒಕ್ಕೂಟ ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರಗಳು (ಒಪೆಕ್+) ಕಚ್ಚಾ ತೈಲದ ಉತ್ಪಾದನೆ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಗೊಳಿಸುತ್ತಿವೆ. ಆದರೆ ಕೆಲವು ಸಣ್ಣ ಉತ್ಪಾದಕರಿಗೆ ಉತ್ಪಾದನೆ ಹೆಚ್ಚಿಸುವ ಸಾಮರ್ಥ್ಯ ಇಲ್ಲ. ‘ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 100 ಡಾಲರ್ ಆಗುವುದು ನಮಗೆ ಬೇಕಿಲ್ಲ. ಆ ಬೆಲೆಯನ್ನು ನಿಭಾಯಿಸಲು ವಿಶ್ವದ ಇನ್ನೂ ಸಜ್ಜಾಗಿಲ್ಲ’ ಎಂದು ಒಮಾನ್ ದೇಶದ ಇಂಧನ ಸಚಿವ ಮೊಹಮ್ಮದ್ ಅಲ್ ರುಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT