ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ ಬೆಲೆ ಹೆಚ್ಚಳ ಬಜೆಟ್‌ ಲೆಕ್ಕ ಏರುಪೇರು?

CRUDE OIL
Last Updated 21 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 64.78 ಡಾಲರ್‌ಗೆ ತಲುಪಿದ್ದು, ದೇಶದ ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ.

ತನ್ನ ಬೇಹುಗಾರಿಕಾ ಡ್ರೋನ್‌ ಹೊಡೆದು ಉರುಳಿಸಿದ ಇರಾನ್‌ ವಿರುದ್ಧ ಅಮೆರಿಕೆಯು ಪ್ರತೀಕಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ತೈಲದ ಬೆಲೆ ಏರಿಕೆ ಹಾದಿಯಲ್ಲಿ ಇದೆ. ತೈಲ ಬೆಲೆಯು ಗುರುವಾರ ಏಕಾಏಕಿ ಶೇ 5ರಷ್ಟು ಏರಿಕೆ ಕಂಡಿತು.

ತೈಲ ಬೆಲೆ ದಿಢೀರನೆ ಹೆಚ್ಚಳಗೊಂಡರೆ ಅದರಿಂದ ಭಾರತವು ಆಮದು ಮಾಡಿಕೊಳ್ಳುವ ತೈಲಕ್ಕೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಒಟ್ಟು ಬೇಡಿಕೆಯ ಶೇ 84ರಷ್ಟನ್ನು ತೈಲ ಆಮದು ಮಾಡಿಕೊಳ್ಳಲಾಗುತ್ತಿದೆ.

ದುಬಾರಿ ತೈಲವು ಚಾಲ್ತಿ ಖಾತೆ ಕೊರತೆ ಹೆಚ್ಚಿಸಲಿದೆ. ಇದರ ಪರಿಣಾಮವಾಗಿ ಡಾಲರ್‌ ಎದುರು ರೂಪಾಯಿ ವಿನಿಮಯ ದರ ಇನ್ನಷ್ಟು ಕಡಿಮೆಯಾಗಲಿದೆ. ಇದು ಕೇಂದ್ರ ಸರ್ಕಾರದ ಬಜೆಟ್‌ ಲೆಕ್ಕಾಚಾರವನ್ನು ಸಹ ಏರುಪೇರು ಮಾಡಲಿದೆ.

ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 10 ಡಾಲರ್‌ ಏರಿಕೆಯಾದರೆ ಅದರಿಂದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 0.2 ರಿಂದ ಶೇ 0.3ರಷ್ಟು ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT