ಡಿಜಿಟಲ್‌ ಕರೆನ್ಸಿ ವಹಿವಾಟುಸುಲಭ ಲಾಭ–ದುರ್ಲಭ !

7

ಡಿಜಿಟಲ್‌ ಕರೆನ್ಸಿ ವಹಿವಾಟುಸುಲಭ ಲಾಭ–ದುರ್ಲಭ !

Published:
Updated:
Deccan Herald

ಸದ್ಯ ಹಲವು ಕ್ರಿಪ್ಟೊ ಕರೆನ್ಸಿಗಳು (ಡಿಜಿಟಲ್‌ ಕರೆನ್ಸಿ) ಚಾಲ್ತಿಯಲ್ಲಿವೆ. ಅವುಗಳ ಮೌಲ್ಯಗಳಲ್ಲಿ ಏರಿಳಿತ ಕಾಣುತ್ತಿರುತ್ತೇವೆ. ಇಂತಹ ಏರಿಳಿತವನ್ನು ಗ್ರಾಹಕರಿಗೆ ಸಕಾಲದಲ್ಲಿ ತಿಳಿಸುವಂತಹ ತಂತ್ರಾಂಶಗಳು ಈಗ ಮಾರುಕಟ್ಟೆ ಪ್ರವೇಶಿಸಿವೆ. 

ಡಿಜಿಟಲ್‌ ಕರೆನ್ಸಿಗಳು ನಿಂತಿರುವುದೇ ಮೌಲ್ಯದ ಮೇಲೆ. ಇಂತಹ ಕರೆನ್ಸಿಗಳಲ್ಲಿನ ಮೌಲ್ಯಗಳಲ್ಲಿ ಆಗುವ ಏರಿಳಿತವನ್ನು ತಿಳಿಸಲು ಲೆಕ್ಕವಿಲ್ಲದಷ್ಟು ಸೇವೆಗಳು ಗ್ರಾಹಕರಿಗೆ ಲಭ್ಯ ಇವೆ. ಹಲವು ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ. ಅವುಗಳಲ್ಲಿ ಪ್ರಮುಖವಾದವು Coinmarketcap.com ಮತ್ತು Onchainfx.com. ಹಲವು ಅಂಕಿ–ಅಂಶಗಳೊಂದಿಗೆ ಮಾರುಕಟ್ಟೆಯ ಮಾಹಿತಿಯನ್ನು ಈ ವೆಬ್‌ಸೈಟ್‌ಗಳು ತೆರೆದಿಡುತ್ತವೆ.

ಆ ಮೂಲಕ ಡಿಜಿಟಲ್‌ ಕರೆನ್ಸಿಗಳಲ್ಲಿನ ವ್ಯತ್ಯಾಸವನ್ನು ನೀವು ಹೋಲಿಸಿ ನೋಡಬಹುದು. ಸದ್ಯ ಎಷ್ಟು ಜನ ನಿರ್ದಿಷ್ಟ ಕರೆನ್ಸಿಯನ್ನು ಬಳಸುತ್ತಿದ್ದಾರೆ ಮತ್ತು ಎಷ್ಟು ಪ್ರೋಗ್ರಾಮರ್‌ಗಳು ಈ ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ ಎಂಬಂತಹ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ನಿಮಗೆ ಸಿಗುತ್ತದೆ.

ಬೆಲೆ ಅಥವಾ ಮೌಲ್ಯವನ್ನು ಹೊರತುಪಡಿಸಿ, ಬಳಕೆದಾರರು ತಮ್ಮ ಸಮುದಾಯವನ್ನು ಅಭಿವೃದ್ಧಿ ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಈ ಕ್ರಿಪ್ಟೊ ಕರೆನ್ಸಿಗಳು ಕೊಡುಗೆ ನೀಡುತ್ತವೆ. ಆನ್‌ಲೈನ್‌ ಬಳಕೆದಾರರನ್ನು ಒಗ್ಗೂಡಿಸುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಕರೆನ್ಸಿಗಳನ್ನು ಬಳಸಿ ವ್ಯವಹಾರ ನಡೆಸುವವರ ಆಸಕ್ತಿಗಳನ್ನು ತಿಳಿದುಕೊಳ್ಳಲು ಕಂಪನಿಗಳಿಗೂ ಇದರಿಂದ ಅನುಕೂಲವಾಗುತ್ತದೆ. 

ಆನ್‌ಲೈನ್‌ ಬ್ಯಾಂಕಿಂಗ್‌ ಸಹಕಾರಿ: ಡಿಜಿಟಲ್‌ ಕರೆನ್ಸಿಗಳಿಂದ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆ ಹೊಸ ಮಜಲನ್ನು ತಲುಪಿದೆ. ಆದರೆ, ಬಹಳಷ್ಟು ಜನ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿಲ್ಲ. ಆನ್‌ಲೈನ್‌ನಲ್ಲೇ ಚೆಕ್‌ ಡೆಪಾಸಿಟ್‌ ಮಾಡುವ ಸೌಲಭ್ಯ ಇರುವುದರಿಂದ ಬ್ಯಾಂಕಿಗೆ ಅಲೆಯುವುದು ತಪ್ಪುತ್ತಿದೆ. ಬಡ್ಡಿ ದರ ಮತ್ತು ಲಾಭದ ದೃಷ್ಟಿಯಿಂದಲೂ ಆನ್‌ಲೈನ್‌ ಬ್ಯಾಂಕಿಂಗ್ ಲಾಭದಾಯಕವಾಗಿದೆ. Bankrate ಮತ್ತು NerdWalletನಂತಹ ವೆಬ್‌ಸೈಟ್‌ಗಳಲ್ಲಿ ಹಲವು ಆಫರ್‌ಗಳು ಇರುತ್ತವೆ.

ನಿರ್ದಿಷ್ಟ ಸೇವೆ ಪಡೆದವರಿಗೆ ರಿಯಾಯ್ತಿ ದೊರೆಯುವುದಲ್ಲದೆ, ‘ಕ್ಯಾಷ್‌ ಬ್ಯಾಕ್‌’ ಕೊಡುಗೆಯೂ ಇರುತ್ತದೆ. ಅಲ್ಲದೆ, ಬೇರೆ ನೆಟ್‌ವರ್ಕ್‌ನ ಎಟಿಎಂ ಕೇಂದ್ರಗಳನ್ನು ಹೆಚ್ಚು ಬಾರಿ ಬಳಸಿದರೆ ಹಾಕುವ ಶುಲ್ಕದಿಂದಲೂ ನಾವು ತಪ್ಪಿಸಿಕೊಳ್ಳಬಹುದು.  

ಸಾಲ ಸೌಲಭ್ಯಕ್ಕೂ ವೆಬ್‌ಸೈಟ್‌: ಮನೆ ಖರೀದಿಗೆ ಅಥವಾ ಇನ್ನಾವುದೇ ಉದ್ದೇಶಕ್ಕೆ ಸಾಲ ಬಯಸುವವರು ಮಾಹಿತಿಗೆ ಹೆಚ್ಚಾಗಿ Credit Karma ವೆಬ್‌ಸೈಟ್‌ ಬಳಸಬಹುದು. ಸಾಲ ಬಯಸುವ ವ್ಯಕ್ತಿಯ ಕ್ರೆಡಿಟ್‌ ಸ್ಕೋರ್‌ ಅನ್ನು ಇಲ್ಲಿ ತಿಳಿದುಕೊಳ್ಳಬಹುದು. ಈ ವೆಬ್‌ಸೈಟ್‌ನಲ್ಲಿ ಪ್ರತಿ ಬಾರಿ ನಿಮ್ಮ ಬ್ಯಾಂಕಿಂಗ್‌ ವಿವರಗಳನ್ನು ಭರ್ತಿ ಮಾಡುವ ಅವಶ್ಯಕತೆ ಇರುವುದಿಲ್ಲ. 

ಶೂನ್ಯಕ್ಕಿಳಿಯುವ ಭೀತಿ!: ಬಿಟ್‌ಕಾಯಿನ್‌ ಮತ್ತು ಕ್ರಿಪ್ಟೊ ಕರೆನ್ಸಿಯಂತಹ ಡಿಜಿಟಲ್‌ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಎಷ್ಟು ಸುಲಭವೋ, ಅಷ್ಟೇ ಕಠಿಣವೂ ಹೌದು. ಇವುಗಳ ಮೌಲ್ಯ ಯಾವುದೇ ಕ್ಷಣದಲ್ಲಿ ಶೂನ್ಯಕ್ಕೆ ಇಳಿಯುವ ಭೀತಿಯೂ ಇರುತ್ತದೆ. ಇವು ಅಲ್ಪಾವಧಿಗೆ ಹೂಡಿಕೆ ಮಾಡುವವರಿಗೆ ಮಾತ್ರ ಇವು ಸಹಕಾರಿ. ಅಲ್ಲದೆ, ಕಡಿಮೆ ಮೊತ್ತ ಹೂಡುವುದೂ ಉತ್ತಮ ಯೋಚನೆ.

-ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !