ನವದೆಹಲಿ: ರಾಜ್ಯಗಳ ಮಾಸಿಕವಾರು ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರದ ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ, ಲೋಕಸಭೆಗೆ ತಿಳಿಸಿದೆ.

ಪ್ರತಿ ಬೆಳೆ ಋತು ಆರಂಭಕ್ಕೂ ಮೊದಲೇ ರಾಜ್ಯಗಳಿಂದ ತಿಂಗಳವಾರು ಬೇಡಿಕೆ ಪಟ್ಟಿಯನ್ನು ಸ್ವೀಕರಿಸಲಾಗುತ್ತದೆ. ಈ ಬೇಡಿಕೆಗೆ ಅನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರು, ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಬೆಳೆ ಋತುವಿಗೆ ರಾಜ್ಯಗಳಿಗೆ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬೇಕಿದೆ ಎಂಬ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಅಂದಾಜಿಸುತ್ತದೆ. ಇದಕ್ಕೆ ಅನುಗುಣವಾಗಿ ಬೇಡಿಕೆ ಪಟ್ಟಿ ಸ್ವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಗಳಿಗೆ ರವಾನಿಸಿದ ರಸಗೊಬ್ಬರವನ್ನು ಸಂಯೋಜಿತ ರಸಗೊಬ್ಬರ ಮಾನಿಟರಿಂಗ್ ಸಿಸ್ಟಂ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಪ್ರತಿ ವಾರ ಕೃಷಿ ಮತ್ತು ರಸಗೊಬ್ಬರ ಇಲಾಖೆಗಳು ಜಂಟಿಯಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಮಟ್ಟದ ಅಧಿಕಾರಿಗಳೊಟ್ಟಿಗೆ ಚರ್ಚಿಸಲಿವೆ. ರಸಗೊಬ್ಬರ ತಲುಪಿರುವುದು, ಬೇಡಿಕೆ ಇತ್ಯಾದಿ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ವಿವರಿಸಿದ್ದಾರೆ.

ದೇಶದಲ್ಲಿ ರಸಗೊಬ್ಬರದ ಉತ್ಪಾದನೆ ಮತ್ತು ಬೇಡಿಕೆ ನಡುವಿನ ಕೊರತೆಯ ಅಂತರವನ್ನು ಆಮದು ಮೂಲಕ ಸರಿದೂಗಿಸಲಾಗುತ್ತದೆ. ಕೊರತೆಯಾಗುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಬೆಳೆ ಋತುವಿನ ಆರಂಭಕ್ಕೂ ಮೊದಲೇ ಎಷ್ಟು ಪ್ರಮಾಣದಲ್ಲಿ ದೇಶೀಯವಾಗಿ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಬೇಕಿದೆ ಎಂಬುದನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
.ಆಳ –ಅಗಲ: ರಸಗೊಬ್ಬರ ಸಹಾಯಧನ ಇಳಿಕೆ ಮತ್ತು ಯೂರಿಯಾ ಬೆಲೆಯ ಸುತ್ತ.
ಈ ಬಾರಿಯ ಮುಂಗಾರು ಅವಧಿಗೆ 59.87 ಲಕ್ಷ ಟನ್ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಗೊಬ್ಬರದ ಬೇಡಿಕೆ ಬಗ್ಗೆ ಅಂದಾಜಿಸಲಾಗಿತ್ತು. ದೇಶೀಯವಾಗಿ 58.08 ಲಕ್ಷ ಟನ್ ದಾಸ್ತಾನು ಇತ್ತು. ಈ ಪೈಕಿ 46.12 ಲಕ್ಷ ಟನ್ ಮಾರಾಟವಾಗಿದೆ ಎಂದು ವಿವರಿಸಿದ್ದಾರೆ.

ಹಿಂಗಾರು ಅವಧಿಯಲ್ಲಿ ಅಕ್ಟೋಬರ್ 1ರಿಂದ ನವೆಂಬರ್ 24ರ ವರೆಗೆ 31.60 ಲಕ್ಷ ಟನ್ ಡಿಎಪಿ ಬೇಡಿಕೆಗೆ ಅಂದಾಜಿಸಲಾಗಿತ್ತು. 34.07 ಟನ್ ದಾಸ್ತಾನು ಇತ್ತು. ಈ ಪೈಕಿ 24.23 ಲಕ್ಷ ಟನ್ ಮಾರಾಟವಾಗಿದೆ. ಡಿಎಪಿಗೆ ಕೊರತೆ ಇಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.